ನವದೆಹಲಿ: ಆಗಸ್ಟ್ 15ರಂದು ಸ್ವತಂತ್ರ್ಯೋತ್ಸವ ದಿನದ ಜತೆಗೆ ರಕ್ಷಾ ಬಂಧನ ಆಚರಣೆ ಮಾಡಲು ದೇಶದ ಜನರು ಮುಂದಾಗಿದ್ದಾರೆ. ಆದರೆ ಟೀಂ ಇಂಡಿಯಾದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಎರಡು ದಿನ ಮುಂಚಿತವಾಗಿಯೇ ರಕ್ಷಾ ಬಂಧನ ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.ಆಗಸ್ಟ್ 22ರಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಗಾಗಿ ಬುಮ್ರಾ ಕೆರಿಬಿಯನ್ ಪ್ರವಾಸ ಕೈಗೊಳ್ಳಬೇಕಾಗಿದ್ದು, ಹೀಗಾಗಿ ಇಂದು ಮನೆಯಲ್ಲಿ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ. ಇದರ ಜತೆಗೆ ಎರಡು ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಬುಮ್ರಾ ಟೀಂ ಇಂಡಿಯಾ ಡ್ಯುಟಿಗೆ ಹಾಜರಾಗಬೇಕಿರುವ ಕಾರಣ, ರಕ್ಷಾ ಬಂಧನ ಮಿಸ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹಬ್ಬವನ್ನ ಸಹೋದರಿ ಜುಹಿಕಾ ಜತೆ ಆಚರಣೆ ಮಾಡಿಕೊಂಡಿರುವೆ ಎಂದು ಬರೆದುಕೊಂಡಿದ್ದಾರೆ. ಜತೆಗೆ ಎಲ್ಲ ಸಮಯದಲ್ಲೂ ನನ್ನ ಸಪೋರ್ಟ್ಗೆ ನಿಂತಿರುವುದಕ್ಕಾಗಿ ನಿನಗೆ ನಮಸ್ಕಾರಗಳು ಎಂದು ತಿಳಿಸಿದ್ದಾರೆ.ಟಿ-20 ಹಾಗೂ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಬುಮ್ರಾ ಇದೀಗ ಟೆಸ್ಟ್ ಸರಣಿಗಾಗಿ ತಂಡವನ್ನ ಸೇರಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಎರಡು ಟೆಸ್ಟ್ ಪಂದ್ಯ ಆಡಲಿದೆ. ಟೀಂ ಇಂಡಿಯಾದ ಯಾರ್ಕರ್ ಕಿಂಗ್ ಎಂಬ ಪಟ್ಟ ಕಟ್ಟಿಕೊಂಡಿರುವ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1ಸ್ಥಾನದಲ್ಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





