Breaking News

ಉ.ಕ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಹೊಳಲ್ಕೆರೆ ಗ್ರಾಮಸ್ಥರು

ಚಿತ್ರದುರ್ಗ: ಉತ್ತರ ಕರ್ನಾಟಕದಲ್ಲಿ ಎದುರಾದ ನೆರೆ ಹಾವಳಿಯಿಂದಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಂದ ನಿರಾಶ್ರಿತರಿಗೆ ಜನರು ಸಹಾಯಹಸ್ತ ಚಾಚುತ್ತಿದ್ದಾರೆ. ಅದರಂತೆ ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮಸ್ಥರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 3 ಸಾವಿರ ರೊಟ್ಟಿ, ಚಪಾತಿ,45 ಪಾಕೇಟ್ ಅಕ್ಕಿ, ನೀರಿನ ಬಾಟಲ್, ಚಟ್ನಿ ಪುಡಿ, ತೊಗರಿ ಬೇಳೆ,ಕಾರದ ಪುಡಿ, ಸಂಬಾರದ ಪುಡಿ, ೨೦ ಬಿಸ್ಕೇಟ್ ಬಾಕ್ಸ್, 1000 ಹೊಸ ಸೀರೆ, ೧೫೦ ಬೆಡ್ ಶೀಟ್, ಜಮಕಾನ, ರಗ್ಗು, ೧೦೦ ಚಾಪೆ, ೧೦೦ ಟವಲ್, ಪಂಚೆ, ೫೦೦ ಮಹಿಳೆಯ ಉಡುಪುಗಳು, ಮಕ್ಕಳ ರಡಿಮೇಡ್ ಉಡುಪುಗಳು, ಜರ್ಕಿನ್ ಗಳು ಸೇರಿದಂತೆ ನಿತ್ಯ ಬಳಕೆ ವಸ್ತುಗಳನ್ನು ಸಂಗ್ರಹ ಮಾಡಿದ್ದಾರೆ. ಅಲ್ಲದೇ ಖುದ್ದು ಗ್ರಾಮಸ್ಥರು ನೆರೆ ಪೀಡಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *