Welcome to bigtvnews   Click to listen highlighted text! Welcome to bigtvnews
Breaking News

ಕೊಳ್ಳೇಗಾಲದಲ್ಲಿ ಕಾವೇರಿ ಅಬ್ಬರ, ಬದುಕು ಹರೋಹರ..

ಆಂಕರ್: ಕಾವೇರಿ,ಕಬಿನಿಯ ಪ್ರ ವಾಹಕ್ಕೆ ಸಂಪೂರ್ಣ ಜಲಾವೃತ್ತ ಗೊಂಡಿರುವ ನದಿ ಅಂಚಿನ ಆ ಗ್ರಾಮಗಳಲ್ಲಿ ಉದ್ಬವಿಸಿರುವ ಸ ಮಸ್ಯೆ ಹಾಗೂ ಮೊದಲ ಬಾರಿಗೆ ಕಾವೇರಿಯ ಪ್ರವಾಹಕ್ಕೆ ಸಂಪೂ ರ್ಣ ಮುಳುಗಿ ಅಪಾಯದ ಹಂ ತ ತಲುಪಿರುವ ಆ ಸೇತುವೆಯ ನ್ನು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆ ಗ್ರಾ ಮಕ್ಕೆ ಹಾಗೂ ಸೇತುವೆ ಬಳಿ ತೆ ರಳಿ ಪರಿಶೀಲಿಸಿದ್ರು.
ವಾ.ಓ-1:ಹೌದು. ಚಾಮರಾಜನ ಗರ ಜಿಲ್ಲೆಯ ಕೊಳ್ಳೇಗಾಲ ತಾ ಲೂಕಿನ ದಾಸನಪುರ, ಹಂಪಾ ಪುರ,ಮುಳ್ಳೂರು, ಎಡಕುರಿ ಯಾ ಗ್ರಾಮಗಳು ನದಿ ಅಂಚಿನ ಗ್ರಾಮ ಗಳಾಗಿದ್ದು, ಕಾವೇರಿ ಹಾ ಗೂ ಕಬಿನಿ ಪ್ರವಾಹಕ್ಕೆ ತುತ್ತಾಗಿ ಜಲಾವೃತ್ತಗೊಂಡಿರುವ ಗ್ರಾಮ ಗಳಾಗಿವೆ. ಕಾವೇರಿಯ ಪ್ರವಾಹ ದಿಂದಾಗಿ ದಾಸನಪುರ ಗ್ರಾಮ ಸಂಪೂರ್ಣ ಜಲಾವೃತ್ತಗೊಂಡಿ ದೆ. ನದಿ ಅಂಚಿನಲ್ಲಿರುವ ದಾಸ ನಪುರದ ಸುಮಾರು ಸಾವಿರಾ ರು ಎಕರೆ ಜಮೀನುಗಳಲ್ಲಿ ಅಂ ದರೆ ನದಿ ಅಂಚಿನಿಂದ ಸುಮಾ ರು ಒಂದೂವರೆ ಕಿಲೋಮೀಟ ರ್ ದೂರದಷ್ಟು ಜಲಾವೃತ್ತಗೊಂ ಡಿದೆ. ಈ ದೃಶ್ಯ ನೋಡಿದರೆ ಸಾಗರವನ್ನು ನೋಡಿದಂತಾ ಗಲಿದೆ. ದಾಸನಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಭಾಗಗಳಲ್ಲಿರುವ ಜ ಮೀನಿನಲ್ಲಿ ನೀರು ಹರಿಯು ತ್ತಿರುವ ಪರಿಣಾಮ ಅಲ್ಲಲ್ಲಿ ರಸ್ತೆ ಕುಸಿತಗೊಂಡು ಗ್ರಾಮಕ್ಕೆ ಸಂಪ ರ್ಕವೇ ಇಲ್ಲದಂತಾಗಿದೆ. ಜಮೀ ನಿನಲ್ಲಿ ಹರಿಯುತ್ತಿರುವ ನೀರಿನ ಲ್ಲಿ ದೋಣಿಯ ಮೂಲಕವೇ ಸಂಚರಿಬೇಕಾಗಿದೆ. ಅಲ್ಲದೆ ಕಾವೇರಿಯ ಪ್ರವಾಹದಿಂದಾಗಿ ಐತಿಹಾಸಿಕ ವೆಸ್ಲಿ ಸೇತುವೆ ಸಂ ಪೂರ್ಣಮುಳುಗಡೆಯಾಗಿ ಅಪಾಯದ ಹಂತ ತಲುಪಿದೆ. ಎಷ್ಟೇ ಪ್ರವಾಹ ಬಂದಿದ್ದರೂ ವೆಸ್ಲಿ ಸೇತುವೆ ಇಲ್ಲಿಯವರೆಗೆ
ಮುಳುಗಿದ್ದ ಉದಾಹರಣೆಗಳಿರ ಲಿಲ್ಲ. ಈ ಬಾರಿಯ ಪ್ರವಾಹಕ್ಕೆ ಮುಳುಗಡೆಯಾಗಿ ಅಪಾಯಕ್ಕೆ ಸಿಲುಕಿದೆ. ಈ ದೃಶ್ಯವನ್ನು ಕಂಡು ಸಚಿವರಾದ ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಸಂಸದ ಆರ್. ಧ್ರುವನಾರಾಯಣ್, ಹನೂರು ಶಾಸಕ ಆರ್.ನರೇಂದ್ರ ಮೂಕ ವಿಸ್ಮಿತರಾದ್ರು. 
ವಾ.ಓ-2:ಪ್ರವಾಹಕ್ಕೆ ಸಿಲುಕಿ ಕೊಂಡಿರುವ ಸಂತ್ರಸ್ತರಿಗೆ ನೆರ ವು ನೀಡಲು ಅಗತ್ಯ ಕ್ರಮಕೂ ಗೊಳ್ಳಲಾಗಿದೆ. ನೀರು ಹೆಚ್ಚುತ್ತಿ ರುವ ಹಿನ್ನೆಲೆಯ‌ಲ್ಲಿ ಮುನ್ನೆಚ್ಚರಿ ಕೆ ಕ್ರಮವಹಿಸಿ ನದಿ ಅಂಚಿನ ಗ್ರಾಮಸ್ಥರನ್ನು ಸೂಕ್ತ ಸ್ಥಳಗಳಿಗೆ ಕಳುಹಿಕೊಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂ ಜಾಗ್ರತ ಕ್ರಮವಾಗಿ ಅಗ್ನಿ ಶಾಮ ಕ ದಳ, ಪೊಲೀಸ್ ಹಾಗೂ ಇತ ರೆ ಇಲಾಖೆಯ ಅಧಿಕಾರಿಗಳನ್ನು ಜಿಲ್ಲಾಡಳಿತ ನಿಯೋಜಿಸಿದೆ.
ಸಿ.ಪುಟ್ಟರಂಗಶೆಟ್ಟಿ, ಸಚಿವ
ವಾ.ಓ-3: ಹಲವು ವರ್ಷಗಳ ಹಿಂದೆ ಅಂದರೆ 1992ರಲ್ಲಿ ಇ ದಕ್ಕಿಂತೂ ಹೆಚ್ಚ ಪ್ರವಾಹ ಬಂ ದಿತ್ತು. ಪ್ರವಾಹ ಬಂದ ಸಂದ ರ್ಭದಲ್ಲಿ ಅಧಿಕಾರಿಗಳು ಬಂದಿ ದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾವ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ. ಈ ಬಾರಿ ಬಂದ ಪ್ರವಾಹದಿಂದ ಗ್ರಾಮದೊಳಗೆ ನೀರು ನುಗ್ಗಿದೆ. ಅಲ್ಲದೆ ಜಮೀನುಗಳು ಜಲಾವೃ ತ್ತವಾಗಿದೆ.ಇಲ್ಲಿದ್ದ ಲಕ್ಷಾಂತರ ರೂ. ಬೆಳೆಗಳು ನಾಶವಾಗಿವೆ. ಅಧಿಕಾರಿಗಳು ಈ ಪ್ರವಾಹದಿಂ ದಾಗಿರುವ ನಷ್ಟಕ್ಕೆ ಯಾವ ರೀ ತಿಯಾಗಿ ಪರಿಹಾರಕೊಡ್ತಾರೆ ಅಂತಾನೆ ಗೊತ್ತಿಲ್ಲ. ನಾವು ಅಧಿ ಕಾರಿಗಳನ್ನು ಹುಡುಕಾಡಬೇಕಾ ದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಪ್ರವಾಹ ಸಂತ್ರಸ್ತರು.
 ಕಾಂತರಾಜು, ದಾಸನಪು ರ ಗ್ರಾಮಸ್ಥ
ರಮೇಶ್, ದಾಸನಪುರ ಗ್ರಾಮಸ್ಥ
ಒಟ್ಟಾರೆ ಕಾವೇರಿ, ಕಬಿನಿ ಪ್ರವಾ ಹದಿಂದ ಪ್ರವಾಹ ಭೀತಿ ಎದು ರಿಸುತ್ತಿರುವ ಗ್ರಾಮಗಳಿಗೆ ಮೂ ಲ ಸೌಕರ್ಯ ಒದಗಿಸಲು ಹಾ ಗೂ ಪ್ರವಾಹ ಹೆಚ್ಚಾದರೆ ಜನರ ನ್ನು ಇನ್ನೊಂದೆಡೆಗೆ ಕರೆದೊಯ್ಯ ಲು ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿ ಶಾಮಕದಳಗಳನ್ನು ನಿ ಯೋಜಿಸಿ, ಕೊಳ್ಳೇಗಾಲದಲ್ಲಿ ತೆರೆಯಲಾಗಿರುವ ಗಂಜೀಕೇಂ ದ್ರಗಳಿಗೆ ಸಂತ್ರಸ್ತರನ್ನು ಕರೆದೊ ಯ್ಯುತ್ತಿರುವುದು ಒಳ್ಳೆಯ ಬೆಳ ವಣಿಗೆಯಾಗಿದೆ..

Spread the love

About Shaikh BIG TV NEWS, Hubballi

Check Also

ಉಪನ್ಯಾಸಕರೊಬ್ಬರ ಫೇಸ್ ಬುಕ್ ಪೇಜ್ ಹ್ಯಾಕ್‌ ಮಾಡಿದ ಕಿರಾತಕರು- ಹಣ ನೀಡದಂತೆ ಮನವಿ ಮಾಡಿದ ಮಹಾಂತೇಶ ಸೊಗಲದ

ಧಾರವಾಡ :ಉಪನ್ಯಾಸಕರೊಬ್ಬರ ಪೇಸ್ ಬುಕ್ ಪೇಜ್ ಅನ್ನು ಹ್ಯಾಕ್ ಮಾಡಿದ ಅಪರಿಚಿತ ವ್ಯಕ್ತಿ ಗಳು ಹಣದ ಬೇಡಿಕೆ ಇಟ್ಟಿದ್ದಾರೆ. ಈ …

Leave a Reply

Your email address will not be published. Required fields are marked *

You cannot copy content of this page
Click to listen highlighted text!