Breaking News

ಶ್! ಇಲ್ಕೇಳಿ.. ಅದು ನನ್ ಪರ್ಸನಲ್, ನಿಮಗೆ ಅಧಿಕಾರ ಇಲ್ಲ..

ಶ್.. ಇಲ್ಕೇಳಿ. ಶ್.. ನಾಳೆ ನಾನು ಮಡಿಕೇರಿಗೆ ಹೋಗ್ತೇನೆ. ಅದನ್ನ ಬಿಟ್ಟು ಪರ್ಸನಲ್ ಕೇಳೋದಕ್ಕೆ ನಿಮಗೆ ಅಧಿಕಾರವೇ ಇಲ್ಲ. ಇದಕ್ಕೆ ನಾನ್ ಉತ್ತರವನ್ನೂ ಕೊಡೊದಿಲ್ಲ ಅಂತ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಕಡ್ಡಿ ತುಂಡ್ ಮಾಡಿದಂತೆ ಹೇಳಿದಾರೆ. ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಒಂದ್ರೀತಿ ಉದಾಸೀನತೆಯಿಂದಲೇ ಮಾತನಾಡಿದ್ರು. ಮತ್ತೆ ಸಿಎಂ ಆಗ್ತೇನೆ ಅಂತ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿರೋದು ಸಾಕಷ್ಟು ಚರ್ಚೆ ನಡೆದಿದೆ. ಇದರ ಮಧ್ಯೆಯೇ ಸೆಪ್ಟೆಂಬರ್ ಮೊದಲ ವಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜತೆಗೆ ಯುರೋಪ್ ಪ್ರವಾಸ ಕೈಗೊಳ್ತಿದ್ದೀರಂತೆ ಅಂತ ಮಾಧ್ಯಮದವರ ಪ್ರಶ್ನೆಯಿಂದ ಒಂದಿಷ್ಟು ರೇಗಿದಂತೆ ಕಾಣಿಸಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ, ಯುರೋಪ್ ಪ್ರವಾಸ ನನ್ನ ಪರ್ಸನಲ್. ಏನಾದ್ರೂ ಆಫೀಸಿಯಲ್ ಪ್ರಶ್ನೆಯಿದ್ರೇ ಕೇಳಿ. ಅದನ್ನ ಬಿಟ್ಟು ಪರ್ಸನಲ್ ವಿಷ್ಯ ಕೇಳಿದ್ರೇ ನಾನೇನೂ ಉತ್ತರ ಕೊಡೊದಿಲ್ಲ. ನಾಳೆ ಮಡಿಕೇರಿಗೆ ಹೋಗೋದು ನಿಶ್ಚಿತ. ಅದನ್ನ ಬಿಟ್ಟು ಮತ್ತೆ ನಾನ್ ಎಲ್ಲಿಗೆ ಹೋಗ್ತೇನೆ ಅಂತ ಕೇಳೋದಕ್ಕೆ ನಿಮಗೆ ಅಧಿಕಾರವಿಲ್ಲ. ಅದಕ್ಕೆ ನಾನ್ ಉತ್ತರವನ್ನೂ ಕೊಡೊದಿಲ್ಲ, ದಾಟ್ ಈಸ್ ಏ ಆನ್ಸರ್ ಅಂತ ಕಾಲ್ಕಿತ್ತೇಬಿಟ್ರು.  ಆರ್ ವಿ. ದೇಶಪಾಂಡೆ, ಕಂದಾಯ ಸಚಿವ
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *