Breaking News

ಫೇಕ್ ನ್ಯೂಸ್ ತಡೆಗಟ್ಟಲು ರೇಡಿಯೋ ಪ್ರಚಾರಕ್ಕೆ ಮುಂದಾದ ವಾಟ್ಸಪ್!

ನವದೆಹಲಿ: ಜಗತ್ತಿನ ಜನಪ್ರೀಯ ಮೆಸೆಂಜರ್ ಸಾಧನವಾದ ವಾಟ್ಸಪ್ ಈಗ ಭಾರತದಲ್ಲಿ ಫೇಕ್ ನ್ಯೂಸ್ ತಡೆಗಟ್ಟಲು ರೇಡಿಯೋ ಪ್ರಚಾರಕ್ಕೆ ಮುಂದಾಗಿದೆ. 
ಇತ್ತೀಚಿಗೆ ಫೇಕ್ ನ್ಯೂಸ್ ವಿಚಾರವಾಗಿ ಕೇಂದ್ರ ಸರ್ಕಾರವು ವಾತ್ಸಪ್ ಗೆ ಸೂಚನೆ ನೀಡಿತ್ತು.ಈ ಹಿನ್ನಲೆಯಲ್ಲಿ ಅದು ಫಾರ್ವರ್ಡ್ ಮಾಡುವ ಆಯ್ಕೆಯನ್ನು ಐದಕ್ಕೆ ಮಾತ್ರ ಸಿಮಿತಗೊಳಿಸಿತ್ತು. ಆದರೆ ಇದಕ್ಕೆ ಸಮಾಧಾನಗೊಳ್ಳದ ಕೇಂದ್ರ ಸರ್ಕಾರವು  ಫೇಕ್ ನ್ಯೂಸ್ ನ ಮೂಲ ಪತ್ತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಲು ಸೂಚನೆ ನೀಡಿತ್ತು. ಆದರೆ ಇದಕ್ಕೆ ವಾಟ್ಸಪ್ ಸರ್ಕಾರದ ಬೇಡಿಕೆಯನ್ನು ನಿರಾಕರಿಸಿ ಇದನ್ನು ತಡೆಗಟ್ಟಲು ಸರ್ಕಾರ ,ನಾಗರಿಕ ಸಮಾಜ,ಮತ್ತು ಕಂಪನಿ ಸಾಮೂಹಿಕವಾಗಿ ನಿಯಂತ್ರಿಸುವ ಕ್ರಮದ ಬಗ್ಗೆ ಪ್ರಸ್ತಾಪಿಸಿತ್ತು. ಇನ್ನೊಂದೆಡೆಗೆ ಸುಪ್ರಿಂಕೋರ್ಟ್ ಈ ವಿಷಯದಲ್ಲಿ ಮದ್ಯಸ್ಥಿಕೆ ವಹಿಸಿರುವುದರಿಂದ ಈಗ ವಾಟ್ಸಪ್  ಹೊಸ ಕ್ರಮಗಳಿಗೆ ಮುಂದಾಗಿದೆ.
ಈ ಕುರಿತಾಗಿ ಪಿಟಿಐ ತಿಳಿಸಿರುವ ವಾಟ್ಸಪ್ ವಕ್ತಾರ ” ರೇಡಿಯೋ ಪ್ರಚಾರ ಇಂದಿನಿಂದ ದೇಶಾದ್ಯಂತ 46 ಹಿಂದಿ ರೇಡಿಯೋ ಕೇಂದ್ರಗಳಲ್ಲಿ ಅದರಲ್ಲೂ ಬಿಹಾರ್,ಜಾರ್ಖಂಡ್,ಮಧ್ಯಪ್ರದೇಶ ,ಚತ್ತೀಸ್ ಘಡ್,ರಾಜಸ್ಥಾನ್ ,ಉತ್ತರಪ್ರದೇಶ ,ಉತ್ತರಖಂಡ್ ಗಳಲ್ಲಿ ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ವಾತ್ಸಪ್ ಮೂಲಕ  ಫೇಕ್ ನ್ಯೂಸ್ ಗಳು ಹರಡಿ ಮಾಬ್ ಲಿಂಚಿಂಗ್ ನಂತಹ  ಪ್ರಕರಣಗಳು ದೇಶಾದ್ಯಂತ ವರದಿಯಾಗಿದ್ದವು ಈ ಹಿನ್ನಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲು ವಾಟ್ಸಪ್ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *