Breaking News

ಇಂಥ ರಿಸ್ಕೀ ಸ್ಪರ್ಧೆಗೆ ಎದೆ ಗಟ್ಟಿ ಇರ್ಬೇಕು..

ಕುದುರೆ ರೇಸ್ ವೇಳೆ ಕಾರಿಗೆ ಡಿಕ್ಕಿ ಹೊಡೆದ ಕಾರು ಚಾಲಕ ಸ್ವಲ್ಪದರಲ್ಲಿ ಪಾರಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಸವದತ್ತಿ ರಾಜ್ಯ ಹೆದ್ದಾರಿ ಮಾರ್ಗ ಮದ್ಯದಲ್ಲಿ ಪರವಾನಿಗೆ ಇಲ್ಲದೇ ಕುದುರೆ ರೇಸ್ ನ್ನ ನಿನ್ನೆ ನಡೆಸಲಾಗಿತ್ತು. ಕುದುರೆ ರೇಸ್ ಗಿಂತಲೂ ಬೈಕ್ ಸವಾರರೇ ಹೆಚ್ಚಾಗಿದ್ದರು. ಈ ವೇಳೆ ಕುದುರೆ ರೇಸ್ ಹುರಿದುಂಬಿಸಲು  ಹೋದ ಬೈಕ್ ಸವಾರರು ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕಿ ಹಿಂಬದಿ ಬೈಕ್ ಸವಾರ ಸ್ಥಳದಲ್ಲಿ ಬಿದ್ದು, ಕೂದಲೆಳೆಯಿಂದ ಪಾರಾಗಿದ್ದಾನೆ‌. ಆದರೆ ಕಾರಿನ ಹೆಡ್ ಲೈಟ್ ಜಖಂಗೊಂಡಿದ್ದು, ಕಾರು ಹಾನಿಯಾಗಿದೆ. ಏಕಕಾಲಕ್ಕೆ ೧೫ ಕುದುರೆ ಗಾಡಿಗಳು ಓಡುತ್ತಿದ್ದವು, ಕುದುರೆ ರೇಸ್ ಹಿಂದೆ ೧೫೦ಕ್ಕೂ ಹೆಚ್ಚಿನ ಯುವಕರು ಬೈಕ್ ಮೇಲೆ ಹೋಗುತ್ತಿದ್ದರು. ಈ ಘಟನೆಯಿಂದ ಕುದುರೆ ರೇಸ್ ಆಯೋಜಿಸಿದ್ದ ಯುವಕರು ಪೇಚಿಗೆ ಸಿಲುಕಿದ್ದಾರೆ. ಈ ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪರವಾನಿಗೆ ಇಲ್ಲದೇ ಈ ರೀತಿ ರೇಸ್ ಆಯೋಜಿಸಿದ್ದ ಯುವಕರ ಮೇಲರ ಕಠಿಣ ಕ್ರಮ ಜರುಗಿದಸುವಂತೆ ಕಾರು ಮಾಲೀಕರು ಒತ್ತಾಯಿಸಿದ್ದಾರೆ.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *