ಹುಡಿಗಿಗಾಗಿ ಹುಡುಗ್ರು ಕಿತ್ತಾಡಿಕೊಳ್ಳೋದು ಇಲ್ಲ ಕೊಲೆ ಮಾಡಿರೋದನ್ನ ನೋಡಿದ್ದೇವೆ. ಆದ್ರೇ, ಬಾಯ್ ಫ್ರೆಂಡ್ ಗೋಸ್ಕರ ಮೂವರು ಹುಡುಗಿಯರು ಹೊಡೆದಾಡಿಕೊಂಡಿರುವ ವಿಡಿಯೋ ಹುಬ್ಬಳ್ಳಿಯಲ್ಲಿ ಸಖತ್ ವೈರಲ್ ಆಗಿದೆ. ರಸ್ತೆಯ ಮೇಲೆ ಒಬ್ಬ ಹುಡುಗನನ್ನು ಸುತ್ತುವರೆದ ಮೂವರು ಹುಡುಗಿಯರು ಇವ ನನ್ನ ಬಾಯ್ ಫ್ರೆಂಡ್, ಇವ ನನ್ನ ಬಾಯ್ ಫ್ರೆಂಡ್ ಅಂತ ಹೊಡೆದಾಡಿಕೊಂಡಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ನಗರದ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ಮುಂಭಾಗದಲ್ಲಿ ನಡೆದಿದ್ದು ಎನ್ನಲಾಗಿದೆ. ಇವರು ಯಾರು? ಯಾಕೆ ಹೊಡೆದಾಡುತ್ತಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದ್ರೇ, ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಮೂವರು ಹುಡುಗಿಯರು ಒಬ್ಬ ಹುಡುಗನ ಸುತ್ತುವರೆದು ಹೊಡೆದಾಡುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ. ಮೇಲ್ನೋಟಕ್ಕೆ ಬಾಯ್ ಫ್ರೆಂಡ್ ಗೋಸ್ಕರ ಹೊಡೆದಾಡಿದ್ದಾರೆ ಎನ್ನಲಾಗಿದೆ. ಈ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





