Breaking News

ಚುಡಾಯಿಸಿದ್ದಕ್ಕೆ ಕೆನ್ನೆಗೆ ಬಾರಿಸಿದ್ದಳು ಎಂದು ಸೇಡು ತೀರಿಸಿಕೊಳ್ಳಲು ಮನೆಗೆ ನುಗ್ಗಿ ಯುವತಿಗೆ ಚಾಕು ಇರಿತ

ಚಿಕ್ಕಬಳ್ಳಾಪುರ: ಯುವತಿಯನ್ನು ಚುಡಾಯಿಸಿದ್ದಕ್ಕೆ ಸಾರ್ವಜನಿಕವಾಗಿ ಅವಮಾನಗೊಂಡಿದ್ದ ಸೇಡಿನಿಂದ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣವನ್ನು ಚಿಂತಾಮಣಿ ನಗರ ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಲಕ್ಷ್ಮೀ, ಮಂಜುನಾಥ ಹಾಗೂ ಜಬಿವುಲ್ಲಾ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿಗಳಾದ ಕಾರ್ತಿಕ್ ಮತ್ತು ವಿನೋದ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ವಿಶೇಷ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ. ಆರೋಪಿಗಳು ಯುವತಿ ಮೇಘನಾ ಅವರನ್ನು ಚುಡಾಯಿಸಿದ್ದು, ಇದನ್ನು ಪ್ರಶ್ನಿಸಿ ಮೇಘನಾ ಸಾರ್ವಜನಿಕವಾಗಿ ಆರೋಪಿಗಳ ಕೆನ್ನೆಗೆ ಬಾರಿಸಿದ್ದರು. ಇದರಿಂದ ಸೇಡು ತೀರಿಸಿಕೊಳ್ಳಲು ಆರೋಪಿಗಳು ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು, ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Share News

About BigTv News

Check Also

ಚಿಕಿತ್ಸೆಗೆ ಬಂದ ಮಹಿಳೆ ಮೇಲೆ ವೈದ್ಯನಿಂದ ಅತ್ಯಾಚಾರಕ್ಕೆ ಯತ್ನ

ಕೊಪ್ಪಳ: ಚಿಕಿತ್ಸೆ ಪಡೆಯಲು ಖಾಸಗಿ ಕ್ಲಿನಿಕ್‌ಗೆ ಬಂದಿದ್ದ ಮಹಿಳೆ ಮೇಲೆ ಆರ್‌ಎಂ‌ಪಿ ವೈದ್ಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಕುಕನೂರು …

Leave a Reply

Your email address will not be published. Required fields are marked *