ನವದೆಹಲಿ: ಭಾರತೀಯ ಭದ್ರತಾ ಪಡೆಗಳಿಗೆ 9,100 ಕೋಟಿ ರೂಪಾಯಿ ವೆಚ್ಚದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಸಿದ್ಧಪಡಿಸಲು ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಮನ್ ನೇತೃತ್ವದ ಡಿಫೆನ್ಸ್ ಅಕ್ಯುಸಿಶನ್ ಕೌನ್ಸಿಲ್ (ಡಿಎಸಿ) ಅನುಮೋದನೆ ನೀಡಿದೆ. ರಕ್ಷಣಾ ಸಾಮಾಗ್ರಿಗಳನ್ನು ಸ್ಥಳೀಯವಾಗಿ ಸಂಗ್ರಹಿಸಲು ಮತ್ತು ಸಿದ್ಧಪಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಭಾರತ್ ಡೈನಮಿಕ್ ಲಿಮಿಟೆಡ್ ಅಡಿಯಲ್ಲಿ ಎರಡು ‘ಆಕಾಶ ಮಿಸೈಲ್ ಸಿಸ್ಟಮ್’ಗಳನ್ನು ಕೊಂಡುಕೊಳ್ಳಲು ತಿಳಿಸಿದೆ. ಆಕಾಶ ಮಿಸೈಲ್ ಸಿಸ್ಟಮ್ ಅಪ್ಗ್ರೇಡ್ ವರ್ಷನ್ ಆಗಿದ್ದು ಹೊಸ ಅನ್ವೇಷಕ ತಂತ್ರಜ್ಞಾನವನ್ನ ಹೊಂದಿದೆ. ಭದ್ರತಾ ಕಾರ್ಯಚರಣೆ ವೇಳೆ ತನ್ನ ಸುತ್ತಲೂ 360 ಡಿಗ್ರಿ ಆವೃತ್ತಿಯಲ್ಲಿ ಕಣ್ಣು ಹಾಯಿಸಿ ರಕ್ಷಣೆ ಮಾಡುವಂತ ತಂತ್ರಜ್ಞಾನ ಹೊಂದಿದೆ.
T90 ಟ್ಯಾಂಕರ್ಗಳಿಗೆ ಹೆಚ್ಚಿನ ಒತ್ತು
ಇಂಡಿವಿಶುವಲ್ ಅಂಡರ್ ವಾಟರ್ ಬ್ರೀಥಿಂಗ್ ಆಪರಾಟಸ್ (IUWBA)ನ T90 ಟ್ಯಾಂಕರ್ಗಳ ಅಭಿವೃದ್ಧಿ ಮತ್ತು ವಿನ್ಯಾಸವನ್ನು ಮೊದಲಿನಂತೆ ಮುಂದುವರಿಸಲು ಡಿಎಸಿ ತಿಳಿಸಿದೆ. ಗಂಭೀರ ಸಮಸ್ಯೆಗಳಲ್ಲಿ ಹಾಗೂ ತುರ್ತುಪರಿಸ್ಥಿತಿಗಳಲ್ಲಿ ತಕ್ಷಣ ಸಿಬ್ಬಂದಿ ತಪ್ಪಿಸಿಕೊಳ್ಳಲು T90 ಟ್ಯಾಂಕರ್ಗಳು ಅಗತ್ಯವಾದ ಗೇರ್ಗಳನ್ನು ಹೊಂದಿದೆ. ಇದಕ್ಕೆ ಅಳವಡಿಸಿರುವ ವೆಪನ್ ಸಿಸ್ಟಮ್ನ್ನು ಇನ್ನಷ್ಟು ಅಭಿವೃದ್ಧಿ ಮತ್ತು ವಿನ್ಯಾಸಕ್ಕೆ ಡಿಎಸಿ ಅನುಮತಿ ನೀಡಿದೆ. ಅಲ್ಲದೇ T90 ಟ್ಯಾಂಕರ್ಗಳ ವೆಪನ್ನನ್ನು ಹೇಗೆ ಬಳಕೆ ಮಾಡುವುದು ಮತ್ತು ಅದನ್ನು ಹೇಗೆ ಉಪಯೋಗಿಸುವುದು ಎಂಬುದರ ಕುರಿತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಭದ್ರತಾ ಪಡೆಗೆ ತರಬೇತಿ ನೀಡಲಿದೆ. ವಿದೇಶಗಳಿಂದ ಹಿಂದೆ ಖರೀದಿಸಿದ್ದ ಎಲ್ಲ ವಸ್ತುಗಳನ್ನು ಸ್ಥಳೀಯವಾಗಿ ಸಿದ್ಧಪಡಿಸಲಾಗಿದೆ. ಇದನ್ನು ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಮಾಡಲಾಗಿದೆ ಎಂದು ಡಿಎಸಿ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





