ಈಗಿನ ಫುಡ್ ಸ್ಟೈಲ್ಗೆ ನಮ್ಮ ದೇಹ ಜಿಡ್ಡು ಹಿಡಿದು ಹೋಗಿದೆ. ಅದೇ ಪಿಜ್ಜಾ, ಸ್ಯಾಂಡ್ವಿಚ್ ,ಬರ್ಗರ್ಗಳು ದೇಹಕ್ಕೆ ಸೇರಿದ್ರೆ ಜೀರ್ಣವಾಗೋಕೆ ತುಂಬಾನೆ ಟೈಂ ತೆಗೆದುಕೊಳ್ಳುತ್ತೆ. ತಿಂದಿದ್ದು ಸರಿಯಾಗಿ ಡೈಜೆಸ್ಟ್ ಆಗಿಲ್ಲ ಅಂದ್ರೆ ದೇಹ ಫಿಟ್ನೆಸ್ ಕಳ್ಕೊಂಡು ತೂಕ ಹೆಚ್ಚಾಗುತ್ತೆ. ಅದನ್ನ ಕಡಿಮೆ ಮಾಡಿಕೊಳ್ಳೋಕೆ ಚಿಕ್ಕೋರಿಂದ ದೊಡ್ಡವರ ತನಕ ಜಿಮ್ಗಳ ಮೊರೆ ಹೋಗ್ತಾರೆ. ದಿನಕ್ಕೆ ಒಂದೋ ಎರಡೋ ಗಂಟೆ ಕಾಲ ವರ್ಕೌಟ್ ಮಾಡಿ ಮತ್ತದೇ ಪಿಜಾ, ಸ್ಯಾಂಡ್ವಿಚ್ ,ಬರ್ಗರ್ಗಳನ್ನ ತಿಂತಾರೆ. ಇನ್ಮುಂದೆ ನಿಮ್ಮ ಫೇವರೆಟ್ ಆಹಾರ ತಿಂದ್ರೂ ಮನೆಯಲ್ಲೇ ಸಿಗೋ ಈ ಪದಾರ್ಥದಿಂದ ನಿಮ್ಮ ಜೀರ್ಣಕ್ರಿಯೆಯನ್ನ ಉತ್ತಮವಾಗಿಸಬುದು.
ಮನೆಯಲ್ಲೇ ಇದೆ ಆರೋಗ್ಯ ಯಂತ್ರ…!
ಹೌದು, ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಮಸಾಲೆ ಪದಾರ್ಥಗಳಲ್ಲಿ ಕಪ್ಪು ಮೆಣಸು ಕೂಡಾ ಒಂದು. ಇದು ಕೇವಲ ಆಹಾರಕ್ಕೆ ಟೇಸ್ಟ್ ಬರಲಿ ಅಂತ ಮಾತ್ರವಲ್ಲದೇ ಆರೋಗ್ಯವೃದ್ಧಿಗೆ , ತೂಕ ಕಡಿಮೆಗೊಳಿಸಲು ಬಹಳ ಉಪಯುಕ್ತವಾಗಿದೆ. ಪ್ರತಿನಿತ್ಯ ಈ ಕಾಳು ಮೆಣಸಿನಿಂದ ತಯಾರಿಸಿದ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
ಕಪ್ಪು ಮೆಣಸನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ, ಚಯಾಪಚಯ ಕ್ರಿಯೆ ನೈಸರ್ಗಿಕವಾಗಿ ಸುಧಾರಿಸುತ್ತದೆ. ಬೆಳಿಗ್ಗೆ ಮೆಣಸಿನಿಂದ ತಯಾರಿಸಿದ ಟೀಯನ್ನು ಕುಡಿದರೆ ಅತ್ಯಂತ ಉಪಯುಕ್ತ. ಯಾಕಂದ್ರೆ ಬೆಳಗಿನ ಸಮಯದಲ್ಲಿ ದೇಹದ ಚಯಾಪಚಯವು ವೇಗವಾಗಿರುತ್ತದೆ. ಈ ಕಡಿಮೆ ಕ್ಯಾಲೋರಿ ಹೊಂದಿದ ಟೀ ಕುಡಿಯೋದ್ರಿಂದ ಅದನ್ನು ಮತ್ತಷ್ಟು ಹೆಚ್ಚಿಸಬಹುದು. ಹಾಗೂ ಮಸಾಲೆ ಪದಾರ್ಥದಲ್ಲಿರುವ ಥರ್ಮೋಜೆನಿಕ್ ಕ್ಯಾಲೋರಿ ಬರ್ನ್ ಮಾಡಲು ಸಹಕರಿಸುತ್ತದೆ.
ಮ್ಯಾಕ್ರೋಬಯೋಟಿಕ್ ನ್ಯೂಟ್ರಿಶಿಯನ್ ಶಿಲ್ಪ ಅರೋರಾ ಅವರ ಪ್ರಕಾರ, ಕಪ್ಪು ಮೆಣಸು ಪೈಪರಿನ್ ಅನ್ನು ಹೊಂದಿರುತ್ತೆ . ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ.
ಕಪ್ಪು ಮೆಣಸು ಟೀ ತಯಾರಿಸೋದು ಹೇಗೆ ?
2 ಕಪ್ ನೀರನ್ನ ಚೆನ್ನಾಗಿ ಕುದಿಸಿ, ಕುದಿಸದ ನೀರಿಗೆ 1 ಸ್ಪೂನ್ ಮೆಣಸನ್ನು ಪುಡಿ ಮಾಡಿ ಹಾಕಬೇಕು. ನಂತರ ಅದಕ್ಕೆ ಒಂದು ಸ್ಪೂನ್ ನಿಂಬೆ ಹಣ್ಣಿನ ರಸ ಮತ್ತು ಸ್ವಲ್ಪ ಶುಂಟಿಯನ್ನ ಹಾಕಿ 5 ನಿಮಿಷ ಕುದಿಸಬೇಕು. ಚೆನ್ನಾಗಿ ಕುದಿಸಿದ ನಂತರ 2 ನಿಮಿಷ ತಣ್ಣಗಾಗಲು ಬಿಟ್ಟರೆ ಪೆಪ್ಪರ್ ಟೀ ಕುಡಿಯಲು ರೆಡಿ.
bigtvnews | Hubli Dharwad News | Kannada News | Karnataka News Hubli News | News In Hubli | Local news





