Breaking News

ಧರೆಗುರುಳಿದ ಮನೆ ಪವಾಡ ರೀತಿಯಲ್ಲಿ ಪಾರಾದ ಕುಟುಂಬ

ಧಾರವಾಡ : ಜಿಲ್ಲೆಯ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಳ್ಳಾವರ ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಗಂಗಾರಾಮ ವಡ್ಡರ ಎಂಬುವವರ ಮನೆ ಕುಸಿದು ಬಿದ್ದಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಅತಿಯಾದ ಮಳೆಗೆ ಅರವಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕುಂಬಾರಕೊಪ್ಪ ಗ್ರಾಮದ ನಿವಾಸಿ ಗಂಗಾರಾಮ ವಡ್ಡರ ಎಂಬುವವರ ಮನೆಯ ಮೇಲ್ಬಾವಣಿಯಲ್ಲಿ ನೀರು ಸೋರಿ ರಾತ್ರಿ ವೇಳೆ ಮನೆಯ ಗೋಡೆಗಳು ಕುಸಿದಿವೆ ಮನೆಯಲ್ಲಿ ಇದ್ದವರು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.

ಸೂರು ಕಳೆದುಕೊಂಡು ಕುಂಬಾರಕೊಪ್ಪ ನಿವಾಸಿ ಗಂಗಾರಾಮ ಹಾಗೂ ಅವರ ಕುಟುಂಬ ತಲೆ ಮೇಲೆ ಕೈ ಹೊತ್ತು ಚಿಂತೆಗೀಡಾಗಿದ್ದು.. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಸ್ಥಳಕ್ಕೆ ಭೇಟಿ ನೀಡಿ ಸಂಬಂಧ ಪಟ್ಟ ಅಧಿಕಾರಿಗಳನ್ನ ಸಂಪರ್ಕಿಸಿ ಗಂಗಾರಾಮ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಅರವಟಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ ಜೋಡಟ್ಟಿ ಒತ್ತಾಯಿಸಿದ್ದಾರೆ.

Share News

About BigTv News

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *