ಲಂಡನ್: ಬ್ಯಾಂಕ್ಗಳಿಗೆ ಈಗಾಗಲೇ ₹ 9 ಸಾವಿರ ಕೋಟಿ ಪಂಗನಾಮ ಹಾಕಿ ವಿದೇಶಕ್ಕೆ ಹಾರಿರುವ ವಿಜಯ ಮಲ್ಯ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಲ್ಯ ಒಡೆತನದ ಫೋರ್ಸ್ ಇಂಡಿಯಾ ಫಾರ್ಮುಲಾ ರೇಸಿಂಗ್ ತಂಡದ ಮಾರಾಟದಲ್ಲಿ 13 ಭಾರತೀಯ ಬ್ಯಾಂಕುಗಳ ಒಕ್ಕೂಟಗಳು 40 ಮಿಲಿಯನ್ ಪೌಂಡ್ನಷ್ಟು ಅಂದರೆ ಸುಮಾರು 378 ಕೋಟಿ ರೂಪಾಯಿಗಳಷ್ಟು ಹಣವನ್ನ ಪಡೆಯುವ ಅವಕಾಶವನ್ನು ಕಳೆದುಕೊಂಡಿವೆಯಂತೆ.
ಈ ಸಂಬಂಧ ರೇಸಿಂಗ್ ತಂಡವನ್ನ ಖರೀದಿಸಲು ತುದಿಗಾಲಲ್ಲಿ ನಿಂತಿದ್ದ ಇಬ್ಬರು ಪ್ರಮುಖ ಇಬ್ಬರು ಬಿಡ್ಡರ್ಗಳು ಆರೋಪಿಸಿದ್ದಾರೆ. ರಷ್ಯಾದ ರಸಾಯನಿಕ ಗೊಬ್ಬರ ತಯಾರಿಸುವ ಸಂಸ್ಥೆ ಉರಾಲ್ಕಲಿ ಈ ಸಂಬಂಧ ಲಂಡನ್ ಹೈಕೋರ್ಟ್ನ ಮೆಟ್ಟಿಲೇರಿದ್ದು, ಈ ಸಂಬಂಧ ನಡೆದ ಹರಾಜು ಪ್ರಕ್ರಿಯಯೇ ಸರಿಯಿಲ್ಲ ಅಂತಾ ವಾದಿಸಿದೆ. ಫಾರ್ಮುಲಾ ರೇಸ್ ಟೀಂಗಾಗಿ ಎಲ್ಲರಿಗಿಂತಲೂ ಉತ್ತಮವಾದ ಬಿಡ್ ಸಲ್ಲಿಸಲಾಗಿತ್ತು. ಆದರೆ, ಆಡಳಿತ ಮಂಡಳಿಯ ನಿರಾಕರಣೆಯಿಂದ ಬಿಡ್ ಬೇರೆಯವರ ಪಾಲಾಯ್ತು. ಇದ್ರಿಂದ 13 ಬ್ಯಾಂಕ್ಗಳಿಗೆ ನಷ್ಟ ಉಂಟಾಗಿದೆ ಅನ್ನೋದು ಗುತ್ತಿಗೆದಾರರವಾದವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





