Breaking News

ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಫಾತಿಮಾ, ಕವಿತಾ ಜಕ್ಕಲ್ ವಾಪಸ್..!

ಶಬರಿಮಲೆ: ಆ ಜನ್ಮ ಬ್ರಹ್ಮಚಾರಿಯಾಗಿರೋ ಅಯ್ಯಪ್ಪ ಸ್ವಾಮಿ ದರ್ಶನ ಮಾಡಲು ಅದರದ್ದೇ ಆದ ಕಟ್ಟು ಪಾಡುಗಳನ್ನು ಕಳೆದ 800 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದ್ರಲ್ಲೂ, ಪುರುಷರೇ ಅಯ್ಯಪ್ಪನ ದರ್ಶನ ಮಾಡಬೇಕು ಅಂದ್ರೂ ಮಾಲೆ ಧರಿಸಿ, 45 ದಿನಗಳ ಕಠಿಣ ವೃತ ಪಾಲಿಸಿ ಹೋಗ್ತಾರೆ. ಆದ್ರೆ, ಸುಪ್ರೀಂ ಕೋರ್ಟ್​ ಆದೇಶದಂತೆ ಇಂದು ಅಯ್ಯಪ್ಪನ ದರ್ಶನ ಮಾಡಬೇಕು ಅಂತಾ ತೆರಳಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರೇ ಮರಳಿ ಕಳಿಸಿದ್ದಾರೆ. ಆಂಧ್ರದ ಮೋಜೋ ಟಿವಿ ಪತ್ರಕರ್ತೆ ಕವಿತಾ ಜಕ್ಕಲ್ ಹಾಗೂ ಮಹಿಳಾ ಹೋರಾಟಗಾರ್ತಿ ರೆಹನಾ ಫಾತಿಮಾ ಅಯ್ಯಪ್ಪನ ದರ್ಶನ ಪಡೆಯಲು ಹೊರಟಿದ್ದರು. ತಲೆಗೆ ಹೆಲ್ಮೆಟ್​ ಹಾಕಿ 250ಕ್ಕೂ ಹೆಚ್ಚು ಪೊಲೀಸ್ ಭದ್ರತೆಯೊಂದಿಗೆ ಅಯ್ಯಪ್ಪನ ಧ್ವಾರ ಬಾಗಿಲನ್ನ ಪ್ರವೇಶ ಮಾಡಿದ್ದರು. ಇವರು ಅಯ್ಯಪ್ಪನ ಸನ್ನಿಧಿಯತ್ತ ಹೋಗುತ್ತಿದ್ದಂತೆ ಪ್ರತಿಭಟನೆ ಮತ್ತಷ್ಟು ಜೋರಾಯಿತು. ಪರಿಸ್ಥಿತಿ ಉದಿಘ್ನ ಸ್ಥಿತಿಗೆ ಬಂದು ತಲುಪಿತು. ಆದರೂ ಇಬ್ಬರು ಮಹಿಳೆಯರು ಶಬರಿಮಲೆಗೆ ಪ್ರವೇಶ ಮಾಡಲು ಮುಂದಾದರು.ಆದರೆ ಒಂದು ವೇಳೆ ಅಯ್ಯಪ್ಪನ ಸನ್ನಿಧಿಗೆ ಪ್ರವೇಶ ಮಾಡಿದರೆ ಭಾರೀ ಅನಾಹುತಗಳು ಸಂಭವಿಸುವ ಮುನ್ಸೂಚನೆ ಅರಿತ ಪೊಲೀಸ್ ಅಧಿಕಾರಿಗಳು ಇಬ್ಬರು ಮಹಿಳೆಯರ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರು ಕೂಡ ದರ್ಶನ ಪಡೆಯದೇ ವಾಪಸ್​ ಬರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ದೇವಾಲಯದ ಪ್ರಧಾನ ಅರ್ಚಕ ಕೂಡ ಒಂದು ವೇಳೆ ಮಹಿಳೆಯರು ಪ್ರವೇಶ ಮಾಡಿದ್ದೇ ಆದರೆ ನಾನು ಪೂಜೆ ಮಾಡಲ್ಲ. ದೇವಾಲಯದ ಬಾಗಿಲು ಹಾಕಿ ವಾಪಸ್ ಬರುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಫಾತಿಮಾ ಹಾಗೂ ಕವಿತಾ ಅಯ್ಯಪ್ಪನ ಸನ್ನಿಧಿಗೆ ಹೋಗದೇ ವಾಪಸ್ ಆಗುತ್ತಿದ್ದಾರೆ ಎನ್ನಲಾಗಿದೆ

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *