Breaking News

ಇಂದು ವಿಚಾರಣೆಗೆ ಹಾಜರಾಗಬೇಕಿರುವ ಮುತ್ತಪ್ಪ ರೈ..

ಬೆಂಗಳೂರು: ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈಗೆ ಸಂಕಷ್ಟ ಎದುರಾಗಿದೆ. ಆಯುಧ ಪೂಜೆಯ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನ ಇಟ್ಟು ಪೂಜೆ ಮಾಡಿದ್ದ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಮುತ್ತಪ್ಪ ರೈಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ರೈ ಸಿಸಿಬಿ ಕಚೇರಿಗೆ ಹಾಜರಾಗಬೇಕಿದೆ.ಆಯುಧ ಪೂಜೆ ದಿನ ಮುತ್ತಪ್ಪ ರೈ ಕತ್ತಿ, ಡ್ರಾಗರ್, ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮುತ್ತಪ್ಪ ರೈ ರಿವಾಲ್ವರ್ ಹಾಗೂ ಡ್ರಾಗರ್​ಗೆ ಪೂಜೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು. ಈ ಹಿನ್ನಲೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿಯಿಂದ ರೈ ಗೆ ನೋಟಿಸ್ ನೀಡಲಾಗಿದೆ.ಆಯುಧ ಪೂಜೆ ವೇಳೆ ಇಟ್ಟಿದ್ದ ರಿವಾಲ್ವರ್, ಬಂದೂಕುಗಳಿಗೆ ಲೈಸನ್ಸ್ ತರುವಂತೆ ಸೂಚಿಸಿ ನಿನ್ನೆ ಮುತ್ತಪ್ಪ ರೈ ಗೆ ಸಿಸಿಬಿ ನೋಟಿಸ್ ನೀಡಿದೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿರೋ ಶಂಕೆ ಆರ್ಮ್ಸ್ ಆಕ್ಟ್ ಅಡಿಯಲ್ಲಿ ರೈ ಗೆ ನೋಟಿಸ್ ಜಾರಿಯಾಗಿದೆ. ಶಸ್ತಾಸ್ತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಲ್ಲದೆ ಸಾಮಾಜಿಕ ಶಾಂತಿಗೆ ಭಂಗ ತಂದ ಆರೋಪದಡಿ ನೋಟಿಸ್​ ಜಾರಿಯಾಗಿದೆ. ನೋಟಿಸ್ ತಲುಪಿದ 24 ತಾಸುಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ರೈ‌ಗೆ ಸಿಸಿಬಿ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಎಸಿಪಿ ಮರಿಯಪ್ಪರ ಮುಂದೆ ಮುತ್ತಪ್ಪ ರೈ ಇಂದು ವಿಚಾರಣೆಗೆ ಹಾಜರಾಗಬೇಕಿದೆ.

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *