Breaking News

ಮಗುವಿನ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್

ನವದೆಹಲಿ: ದೆಹಲಿ ಟ್ರಾಫಿಕ್​​​ ಪೊಲೀಸ್​ ಸಿಬ್ಬಂದಿ ನವಜಾತ ಹೆಣ್ಣುಮಗುವೊಂದನ್ನ ರಕ್ಷಿಸಿದ್ದಾರೆ. ಇಲ್ಲಿನ ಆರ್​.ಕೆ ಖನ್ನಾ ಟೆನ್ನಿಸ್​​ ಸ್ಟೇಡಿಯಂ ಬಳಿ ಪೊದೆಯೊಂದರಲ್ಲಿ ಮಗು ಪತ್ತೆಯಾಗಿತ್ತು. ಟ್ರಾಫಿಕ್​ ಪೊಲೀಸರು ಆ ಮಗುವನ್ನ ಎತ್ತಿಕೊಂಡು ಬಂದಿದ್ದು, ಮರುಜೀವ ನೀಡಿದ್ದಾರೆ.ಅಕ್ಟೋಬರ್ ​31ರಂದು ಹೆಡ್​ ಕಾನ್ಸ್​​ಟೇಬಲ್ ಅನಿಲ್ ಹಾಗೂ ಕಾನ್ಸ್​​ಟೇನಲ್​​ ಪರ್ವೀನ್​​​ ಆಫ್ರಿಕಾ ಅವೆನ್ಯೂ ರೋಡ್​​ನ ಸ್ಟೇಡಿಯಂ ಬಳಿ ಕಾರ್ಯ ನಿರ್ವಹಿಸುತ್ತಿದ್ರು. ಸಂಜೆ ಸುಮಾರು 4 ಗಂಟೆ ವೇಳೆಗೆ ಮಗುವೊಂದು ಅಳುವ ಶಬ್ದ ಕೇಳಿಸುತ್ತಿತ್ತು. ಸ್ಟೇಡಿಯಂ ಬಳಿ ಪೊದೆಯೊಂದರಿಂದ ಶಬ್ದ ಬರುತ್ತಿತ್ತು. ಅಲ್ಲದೆ ಸ್ಥಳದಲ್ಲಿ ಕೆಲವು ಬೀದಿನಾಯಿಗಳು ಓಡಾಡುತ್ತಿದ್ದುದನ್ನು ಕಂಡಿದ್ದರು. ಇದರಿಂದ ಅನುಮಾನಗೊಂಡು ಕೂಡಲೇ ಟ್ರಾಫಿಕ್​​​ ಚೆಕ್​ ಮಾಡೋದನ್ನ ನಿಲ್ಲಿಸಿ ಇಬ್ಬರೂ ಪೊದೆಯ ಬಳಿ ಧಾವಿಸಿದ್ದಾರೆ. ಅಲ್ಲಿ ನವಜಾತ ಹೆಣ್ಣುಮಗು ಪತ್ತೆಯಾಗಿದೆ. ಬಳಿಕ ದೆಹಲಿ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಮಾಹಿತಿ ನೀಡಿ ಮಗುವನ್ನು ಸಫ್ದರ್​​​ಜಂಗ್​​ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಸದ್ಯ ಮಗು ಆರೋಗ್ಯವಾಗಿದೆ. ಈ ಬಗ್ಗೆ ಸಫ್ದರ್​​ಜಂಗ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೇ ಮಗುವನ್ನ ಕಾಪಾಡಿದ ಟ್ರಾಫಿಕ್​​ ಪೊಲೀಸರಿಗೆ ಬಹುಮಾನವನ್ನೂ ನೀಡಲಾಗಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *