2018ರ ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಮಾಜಿ ಸಚಿವ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗಲಿದ್ದಾರೆಂದು ಟೈಮ್ಸ್ ನೌ ಮತ್ತು ಸಿಎನ್‌ಎಕ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಒಟ್ಟು 200 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿನ ಜನರನ್ನು ಸಮೀಕ್ಷೆಗೆ ಒಳಪಡಿಸಿಕೊಳ್ಳಲಾಗಿತ್ತು. ಪ್ರತಿ ಚುನಾವಣಾ ಕ್ಷೇತ್ರಕ್ಕೆ 120 ಮಾದರಿಗಳನ್ನ ಬಳಸಿಕೊಳ್ಳಲಾಗಿದೆ. ಒಟ್ಟು 8,040 ಮಂದಿ ಈ ಸರ್ವೆಯಲ್ಲಿ ಪಾಲ್ಗೊಂಡಿದ್ದು ಇದರಲ್ಲಿ 4,250 ಮಹಿಳೆಯರು ಹಾಗೂ 3,790 ಪುರುಷರು ಸೇರಿದ್ದಾರೆ. ಇನ್ನೂ ಈ ಸರ್ವೆಯಲ್ಲಿ ಮತದಾರರಿಗೆ ತಮ್ಮ ಕ್ಷೇತ್ರದ ಶಾಸಕರ ಕೆಲಸ ತೃಪ್ತಿ ತಂದಿಲ್ಲ ಅಂತ ಶೇಕಡ 43.27ರಷ್ಟು ಉತ್ತರಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಕಾರ್ಯವೈಖರಿಗೆ ಶೇಕಡ 48ರಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





