Breaking News

ಪತ್ರಕರ್ತೆ ಅತ್ಯಾಚಾರ ಆರೋಪಕ್ಕೆ ಸಂಬಂಧ 'ಸಮ್ಮತ'ವಾದದ್ದು ಎಂದ ಅಕ್ಬರ್

ನವದೆಹಲಿ: ಮಾಜಿ ಕೇಂದ್ರ ಸಚಿವ ಎಂ.ಜೆ ಅಕ್ಬರ್​​ ಅವರ ವಿರುದ್ಧ ಅಮೇರಿಕಾ ಮೂಲದ ಪತ್ರಕರ್ತೆ ಪಲ್ಲವಿ ಗೊಗೋಯಿ ಅತ್ಯಾಚಾರ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಅಕ್ಬರ್​ ಪ್ರತಿಕ್ರಿಯೆ ನೀಡಿದ್ದಾರೆ. ನಾವಿಬ್ಬರೂ ಪರಸ್ಪರ ಒಮ್ಮತದಿಂದ ಸಂಬಂಧದಲ್ಲಿದ್ದೆವು. ಆದ್ರೆ ಆ ಸಂಬಂಧ ಸರಿಯಾಗಿ ಅಂತ್ಯವಾಗಲಿಲ್ಲ ಎಂದು ಅಕ್ಬರ್​ ಹೇಳಿದ್ದಾರೆ.1994ರ ಸಮಯದಲ್ಲಿ ನಾನು ಹಾಗೂ ಪಲ್ಲವಿ ಪರಸ್ಪರ ಸಹಮತದೊಂದಿಗೆ ಸಂಬಂಧ ಆರಂಭಿಸಿದೆವು. ಈ ಸಂಬಂಧ ಕೆಲವು ತಿಂಗಳವರೆಗೆ ಇತ್ತು. ಇದರಿಂದ ನನ್ನ ಸಾಂಸಾರಿಕ ಜೀವನಕ್ಕೂ ತೊಂದರೆಯಾಯಿತು. ಆದ್ರೆ ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ ಎಂದು ಅಕ್ಬರ್​ ಹೇಳಿದ್ದಾರೆ. ನನ್ನ ಜೊತೆ ಕೆಲಸ ಮಾಡಿದವರಿಗೆ ನಾವಿಬ್ಬರೂ ಹೇಗಿರುತ್ತಿದ್ದೆವು ಎನ್ನುವುದು ಗೊತ್ತಿತ್ತು. ಪಲ್ಲವಿಯ ವರ್ತನೆ ನೋಡಿದಾಗ ಆಕೆ ಬಲವಂತದಿಂದ ಕೆಲಸ ಮಾಡಿಕೊಂಡಿದ್ದರಾ ಎಂದು ಯಾರಿಗೆ ಬೇಕಾದ್ರೂ ಕೇಳಿ ಎಂದಿದ್ದಾರೆ.ಇನ್ನು, ಈ ವಿಷಯದಲ್ಲಿ ಅಕ್ಬರ್​ ಪತ್ನಿ ಮಲ್ಲಿಕಾ ಅಕ್ಬರ್​ ಕೂಡ ಪತಿಯನ್ನ ಸಮರ್ಥಿಸಿಕೊಂಡಿದ್ದಾರೆ. ಅಕ್ಬರ್​ ಹಾಗೂ ಪಲ್ಲವಿ ಪರಸ್ಪರ ಸಹಮತದಿಂದ ಇದ್ದುದನ್ನು ಮಲ್ಲಿಕಾ ಕೂಡ ಒಪ್ಪಿಕೊಂಡಿದ್ದಾರೆ. ಇದು ನಡೆದಿರುವುದು 20 ವರ್ಷಗಳ ಹಿಂದೆ. ಪಲ್ಲವಿ ನಮ್ಮ ಮನೆಯಲ್ಲಿ ಅಶಾಂತಿಗೆ ಕಾರಣವಾಗಿದ್ದರು ಎಂದು ಹೇಳಿದ್ದಾರೆ.ಇವರಿಬ್ಬರೂ ತಡರಾತ್ರಿ ಫೋನ್​ನಲ್ಲಿ ಮಾತಾಡುತ್ತಿದ್ದುದು ಹಾಗೂ ನನ್ನ ಮುಂದೆಯೇ ಸಲುಗೆಯಿಂದ ವರ್ತಿಸುತ್ತಿದ್ದುದನ್ನು ಕಂಡು ನನಗೆ ಇವರಿಬ್ಬರ ಬಗ್ಗೆ ಅನುಮಾನ ಬಂದಿತ್ತು. ಈ ಬಗ್ಗೆ ನನ್ನ ಪತಿಯನ್ನ ಪ್ರಶ್ನಿಸಿದ್ದೆ. ಆಗ ಅವರು ಕುಟುಂಬಕ್ಕೆ ಮಹತ್ವ ಕೊಡಲು ನಿರ್ಧರಿಸಿದರು. ಪಲ್ಲವಿ ಈ ರೀತಿ ಯಾಕೆ ಸುಳ್ಳು ಹೇಳ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಆದ್ರೆ ಆಕೆ ಹೇಳುತ್ತಿರುವುದು ಸುಳ್ಳು ಎಂದು ಮಲ್ಲಿಕಾ ಹೇಳಿದ್ದಾರೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *