ಬೆಂಗಳೂರು: ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಕಿ ಬಿರುಗಾಳಿ ಎಬ್ಬಿಸಿದ್ದ ಹ್ಯೂಬ್ಲೋಟ್ ವಾಚ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹ್ಯೂಬ್ಲೋಟ್ ವಾಚ್ ಕೊಡುಗೆ ಸಂಬಂಧ ಸಿದ್ದರಾಮಯ್ಯ ವಿರುದ್ಧ ನಟರಾಜ್ ಶರ್ಮಾ ಎಂಬುವವರು ACBಗೆ ದೂರು ನೀಡಿದ್ದರು. ದೂರುದಾರ ಶರ್ಮಾ ಅವರು ಇದೀಗ ಗಿರೀಶ್ ಚಂದ್ರವರ್ಮಾ ಸಲ್ಲಿಸಿದ ವಾಚ್ ಬಿಲ್ ನಕಲಿ ಎಂದು ಆರೋಪಿಸಿದ್ದಾರೆ.ಇದರಿಂದ ಹ್ಯೂಬ್ಲೋಟ್ ವಾಚ್ ಹಗರಣ ಮುಚ್ಚಿ ಹಾಕಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುಮಾರು 80 ಲಕ್ಷ ಬೆಲೆ ಬಾಳುತ್ತದೆ ಎನ್ನಲಾಗಿದ್ದ ಈ ಹ್ಯೂಬ್ಲೋಟ್ ವಾಚ್ ಅನ್ನು ತಾವು ದುಬೈನ ಖಾತನ್ ಜುವೆಲ್ಲರಿ ಅಂಡ್ ವಾಚ್ಸ್ ಕಂಪನಿಯಿಂದ ಖರೀದಿಸಿದ್ದು, ಅದನ್ನು ಗೆಳೆತನದ ಮೇಲೆ ಸಿದ್ದರಾಮಯ್ಯ ಅವರಿಗೆ ನೀಡಿದ್ದೆ ಎಂದು ಗಿರೀಶ್ ಚಂದ್ರವರ್ಮಾ ತಿಳಿಸಿದ್ದರು.ಇದರ ವಿರುದ್ಧ 2016ರ ಏಪ್ರಿಲ್ ನಲ್ಲಿ ನಟರಾಜ್ ಶರ್ಮಾ ACBಗೆ ದೂರು ಸಲ್ಲಿಸಿದ್ದರು. ಹ್ಯೂಬ್ಲೋಟ್ ವಾಚ್ ತನಿಖೆ ಹಳ್ಳ ಹಿಡಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಅಸಲಿಗೆ, ಹ್ಯೂಬ್ಲೋಟ್ ವಾಚ್ ಖರೀದಿ ಬಿಲ್ ನಕಲಿ ಎಂದು ಶರ್ಮಾ ಆರೋಪ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





