Breaking News

ಗೌರಿಹತ್ಯೆ ಪ್ರಕರಣದ 2ನೇ ಮಧ್ಯಂತರ ಚಾರ್ಜ್‌ಶೀಟ್ ರೆಡಿ..

ಬೆಂಗಳೂರು: ವಿಚಾರವಾದಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ನ್ಯಾಯಾಲಯ 2 ನೇ ಮಧ್ಯಂತರ ಚಾರ್ಜ್‌ಶೀಟ್‌ ಸಲ್ಲಿಸಲು ಮುಂದಾಗಿದೆ. ಚಾರ್ಜ್‌ಶೀಟ್‌ ಸಲ್ಲಿಸಲು ನ್ಯಾಯಾಲಯದಿಂದ ಎಸ್‌ಐಟಿ 180 ದಿನ ಗಡುವು ತೆಗೆದುಕೊಂಡಿತ್ತು. ಸದ್ಯ ಚಾರ್ಜ್​ಶೀಟ್​ ರೆಡಿ ಮಾಡುತ್ತಿರುವ ಎಸ್​ಐಟಿ ಇದೇ ತಿಂಗಳ 27 ನೇ ತಾರೀಖಿನ ಒಳಗೆ ಚಾರ್ಜ್‌ಶೀಟ್ ಸಲ್ಲಿಸಲಿದೆ. 16 ಆರೋಪಿಗಳ ವಿರುದ್ಧ ಬರೋಬ್ಬರಿ 400 ಕ್ಕೂ ಹೆಚ್ಚು ಮಂದಿಯ ಸಾಕ್ಷಿ ಸಂಗ್ರಹ ಮಾಡಿರುವ ಎಸ್​ಐಟಿ ಇದೇ 27 ರಂದು ಸೆಷನ್ಸ್​ ಕೋರ್ಟ್​ನಲ್ಲಿ ಚಾರ್ಜ್​ಶೀಟ್​ ಸಲ್ಲಿಸಲಿದೆ. ಇನ್ನೂ ಪ್ರಕರಣದಲ್ಲಿ ಕೆಲ ಆರೋಪಿಗಳೇ ಸಾಕ್ಷಿಗಳಾಗಿದ್ದಾರೆ ಎನ್ನಲಾಗ್ತಿದ್ದು ಫಸ್ಟ್‌ನ್ಯೂಸ್‌ಗೆ ಎಸ್ಐಟಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Share News

About Shaikh BIG TV NEWS, Hubballi

Check Also

Featured Video Play Icon

ಹೆಣದ ಮೇಲಿನ ರಾಜಕೀಯ ಸರಿಯಲ್ಲ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಜೋಶಿ ಚಾಟಿ..!

ಹುಬ್ಬಳ್ಳಿ: ಗುಪ್ತಚರ ಇಲಾಖೆಯು ಬಹುದೊಡ್ಡ ಪ್ರಶಂಸೆಯ ಕೆಲಸವನ್ನು ಮಾಡಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಳ ಮೇಲೆ ರಾಜಕೀಯ ಮಾಡುವಂತ …

Leave a Reply

Your email address will not be published. Required fields are marked *

You cannot copy content of this page