Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಅಲೋಕ್‌ ಕುಮಾರ್ ಎಂಟ್ರಿಗೆ ಬಿಲ ಸೇರಿದ ಸೈಲೆಂಟ್ ಸುನೀಲ್​ ಗ್ಯಾಂಗ್‌..!

ಬೆಂಗಳೂರು: ಸಿಸಿಬಿ ಹೆಚ್ಚುವರಿ ಪೊಲೀಸ್​ ಆಯುಕ್ತರಾಗಿ ಅಲೋಕ್ ಕುಮಾರ್ ಬೆಂಗಳೂರಿಗೆ ಎಂಟ್ರಿ ಕೊಟ್ಟೆದ್ದೇ ಕೊಟ್ಟಿದ್ದು, ಅಳಕ್​ಪುಳಕ್ ರೌಡಿಗಳೆಲ್ಲಾ ಬಿಲ ಸೇರಿದ್ದಾರೆ. ಆದರೆ ಸೈಲೆಂಟ್ ಸುನೀಲ & ಗ್ಯಾಂಗ್​ ಮಾತ್ರ, ಯಾರೇ ಬರ್ಲಿ ಯಾರೇ ಹೋಗ್ಲಿ, ನಾವಾಡಿದ್ದೇ ಆಟ ಅಂದುಕೊಂಡು ಮೆರೆದಾಡ್ತಿದ್ರು. ಆದ್ರೀಗ ಆ ಗ್ಯಾಂಗ್‌ನ ಲೀಡರ್‌ಗೆ ಖಾಕಿ ಸಿಂಗಂ ಬೆಂಡೆತುತ್ತಿದ್ದಂತೆ ಹಿಂದೆ ಮುಂದೆ ಓಡಾಡ್ತಿದ್ದ ಸಹಚರರು ಬಾಲ ಮುದುರಿಕೊಂಡಿದ್ದಾರೆ.ಸಿಸಿಬಿಗೆ ಹೆಚ್ಚುವರಿ ಆಯುಕ್ತರಾಗಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ಮೇಲೆ ಕ್ರೈಂ ರೇಟ್ಸ್ ಕಡಿಮೆಯಾಗಿದೆ. ಈ ‌ಪೈಕಿ ಕೆಲ ರೌಡಿಗಳು, ಕ್ರೈಂ ಫೀಲ್ಡ್​ಗೇ ಬೈ.. ಬೈ ಹೇಳಿದ್ದಾರೆ. ಮತ್ತೆ ಕೆಲವರು ತಾವಾಗಿ ಕೋರ್ಟ್​ನಲ್ಲಿ ಸರೆಂಡರ್ ಆಗಿ ಜೈಲು ಪಾಲಾಗಿದ್ದಾರೆ. ಆದರೆ ಸದ್ಯ ಸಿಸಿಬಿ ಪೊಲೀಸರ ತಲೆ ಕೆಡಿಸಿರೋದು ಸಿಟಿಯಲ್ಲಿ ಆಕ್ಟೀವ್ ಆಗಿರೋ ರೌಡಿ ಗ್ಯಾಂಗ್ ಸೈಲೆಂಟ್ ಸುನೀಲ & ಗ್ಯಾಂಗ್ ಮಾತ್ರ.ಕಡಬಗೆರೆ ಶ್ರೀನಿವಾಸ್ ಶೂಟೌಟ್ ಕೇಸ್ ಸಂಬಂಧ ಕೊಕಾ ಆಕ್ಟ್ ಅಡಿಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಬಂಧಿತನಾಗಿ, ಸೈಲೆಂಟ್ ಸುನೀಲ ಜೈಲು ಸೇರಿದ್ದ. ಬರೋಬ್ಬರಿ 20 ತಿಂಗಳು ಜೈಲುವಾಸದಲ್ಲಿದ್ದ. ಕಳೆದ 14ರಂದು ಜೈಲಿನಿಂದ ಬಿಡುಗಡೆನೂ ಆಗಿದ್ದ. ಬಿಡುಗಡೆಯಾಗಿದ್ದ ದಿನವೇ ಸಿಸಿಬಿ ಌಂಟಿ ರೌಡಿ ಸ್ಕ್ವಾಡ್​ನ ಇನ್ಸ್​ಪೆಕ್ಟರ್ ಪ್ರಕಾಶ್​ ಸುನೀಲನನ್ನ ವಶಕ್ಕೆ ಪಡೆದು ಬಿಡುಗಡೆಯಾದ ನಂತ್ರ ಏನ್ ಮಾಡ್ತಿಯಾ..? ಮತ್ತೆ ಏನಾದ್ರು ರೌಡಿಸಂನಲ್ಲಿ ನೀನು, ನಿನ್‌ ಗ್ಯಾಂಗ್ ಆಕ್ಟೀವ್ ಆಗಿದ್ದೇ ಆದ್ರೆ, ಸೈಕಲ್ ರವಿಯಂತೆ ನಿನಗೂ ಕಾಲಿಗೆ ಗುಂಡು ಹೊಕ್ಕಿಸಿ ಮತ್ತೆ ಜೈಲಿಗೆ ತಳ್ಳಬೇಕಾಗತ್ತೆ ಅಂತ ಖಡಕ್ ವಾರ್ನ್ ಮಾಡಿ ಕಳಿಸಿದ್ರು. ಸುನೀಲನಿಗೆ ಸಿಸಿಬಿ ಯಾವಾಗ ಖಡಕ್ ವಾರ್ನ್ ಕೊಡ್ತೋ, ರೌಡಿಪರೇಡ್​ಗಳಿಗೂ ಹಾಜರಾಗದೇ ಸಿಸಿಬಿ ಪೊಲೀಸರಿಗೆ ಸೆಡ್ಡು‌ಹೊಡೆದಿದ್ದ. ಆದರೆ, ಸುನೀಲನ‌ ಸಹಚರರಾದ ಒಂಟೆ ರೋಹಿತ್‌, ಸತೀಶ್‌, ಲಕ್ಷ್ಮಿ, ವೇಡಿಯಪ್ಪನ್‌, ಇವರೆಲ್ಲ ತಾವಾಗಿಯೇ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.ಸದ್ಯ ಸುನೀಲ ರೌಡಿಸಂನಲ್ಲಿ ಸೈಲೆಂಟಾಗಿದ್ದಾನೆ. ಆತನ ವಿರುದ್ಧದ ಗ್ಯಾಂಗ್​ಗಳೂ‌ ನಗರದಲ್ಲಿ ಸದ್ಯ ಆಕ್ಟೀವ್ ಆಗಿಲ್ಲ. ಕಡಬಗೆರೆ ಶೂಟೌಟ್​ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರೋ ಸುನೀಲ ಯಾವ್ದೇ ಒಂದು ಸಣ್ಣ ಪ್ರಕರಣದಲ್ಲಿ ಭಾಗಿಯಾದ್ರು ಸಹ ಮತ್ತೆ ಜೈಲಿಗೆ ಅಟ್ಟಲು‌ ಸಿಸಿಬಿ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *