ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲಾರಿಗೂ ಗೊತ್ತು. ಆದ್ರೂ ನಾವು ಮಜ್ಜಿಗೆಯನ್ನ ಬಳಸಲು ಮೂಗುಮುರಿಯುತ್ತೇವೆ. ಹಿಂದಿನ ಕಾಲದಲ್ಲಿ ಮನೆಗೆ ಯಾರಾದ್ರೂ ಬಂದರೆ ಅವರಿಗೆ ತಪ್ಪದೇ ಮಜ್ಜಿಗೆ ಕೊಡುತ್ತಿದ್ರು. ಆದರೆ ಈಗ ಮಜ್ಜಿಗೆ ಬದಲು ಕೂಲ್ ಡ್ರಿಂಕ್ಸ್ ಕೊಡುವುದು ಸಾಮಾನ್ಯವಾಗಿದೆ.ಮಜ್ಜಿಗೆಯಲ್ಲಿ ನಮಗೆ ತಿಳಿದಿರುವದಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವಿದೆ. ಅದರಲ್ಲಿ ಕ್ಯಾಲ್ಸಿಯಂ, ಜೀವಸತ್ವಗಳು ಖನಿಜಾಂಶ ಹೆಚ್ಚಾಗಿದೆ. ಅದಲ್ಲದೇ ಮಜ್ಜಿಗೆಯನ್ನ ಸೇರಿಸಿ ಮಾಡುವ, ಎಲ್ಲಾ ಆಹಾರವು ರುಚಿಕರವಾಗಿರುತ್ತದೆ. ಮಜ್ಜಿಗೆ ಆಮ್ಲೀಯ ಗುಣಗಳನ್ನು ಹೊಂದಿರುವುದರಿಂದ ಅದು ಆಹಾರಕ್ಕೆ ಒಂದು ಸುವಾಸನೆಯನ್ನ ನೀಡುತ್ತದೆ.ಮಜ್ಜಿಗೆಯಲ್ಲಿ ಮಸಲಾ ಮಜ್ಜಿಗೆ, ಶುಂಠಿ ಮಜ್ಜಿಗೆ, ಕಡಿದ ಮಜ್ಜಿಗೆ ಹೀಗೆ ಹಲವಾರು ವೆರೈಟಿ ಮಜ್ಜಿಗೆಳಿವೆ. ಇನ್ನು ಇದಕ್ಕೆ ಶುಂಠಿ ಬಿತ್ತು ಅಂದ್ರೆ ಅದರ ರುಚಿಯೇ ಬೇರೆ.. ರುಚಿಗಷ್ಟೇ ಅಲ್ಲ. ಶುಂಠಿ ಜೀರ್ಣಕ್ರಿಯೆಗೂ ಬಹಳ ಸಹಕಾರಿ ಅಲ್ಲದೇ ಗ್ಯಾಸ್ಟ್ರಿಕ್ ಸಮಸ್ಯೆಗೂ ಇದು ಉತ್ತಮ ಮಜ್ಜಿಗೆ ಪರಿಹಾರ.ಇನ್ನು ಮಜ್ಜಿಗೆ ನಮ್ಮ ಜೀರ್ಣಾಂಗವನ್ನ ತಂಪಾಗಿಡುತ್ತದೆ. ಜೊತೆಗೆ ನಮ್ಮ ಜೀರ್ಣಾಕ್ರಿಯೆಗೆ ಸಹಕರಿಸುತ್ತೆ. ಅಲ್ಲದೇ ಇದು ನಮ್ಮ ದೇಹದಲ್ಲಿನ ಎಣ್ಣೆಯ ಅಂಶವನ್ನ ಹೊರ ಹಾಕಲು ಮಜ್ಜಿಗೆ ಸಹಕರಿಸುತ್ತೆ.ಇನ್ನು ನೀವು ಹೊರಗಡೆ ಪ್ರಯಾಣ ಹೋಗುವಾಗ, ಕಾರ್ಬೊನೇಟೆಡ್ ಪಾನೀಯಗಳು ಕುಡಿಯುವುದಕ್ಕಿಂತ, ಒಂದು ಬಾಟಲ್ ಮಜ್ಜಿಗೆ ಕೊಂಡೊಯ್ದು, ಕುಡಿಯುವುದು ಒಳ್ಳೆಯದು. ಇದು ನಿಮ್ಮ ದೇಹವನ್ನ ನಿರ್ಜಲೀಕರಣದಿಂದ ಕಾಪಾಡುತ್ತದೆ ಮತ್ತು ದೇಹಕ್ಕೆ ಅಗತ್ಯವಿರುವ ಕ್ಯಾಲಿಶಿಯಂ ಅನ್ನ ಕೊಬ್ಬಿನ ಅಂಶವಿಲ್ಲದೇ ಪೂರೈಸುತ್ತದೆ. ಇದರ ಎಲ್ಲಾ ಗುಣಗಳು ನಿಮ್ಮ ದೇಹ ಅನಾವಶ್ಯಕ ತೂಕ ಹೆಚ್ಚಾಗುವಿಕೆಯನ್ನ ತಡೆಯುತ್ತದೆ.ಮಜ್ಜಿಗೆಯಿಂದ ಏನೆಲ್ಲಾ ಲಾಭಗಳಿವೆ..? ಇಲ್ಲಿದೆ ನೋಡಿ1. ಬ್ಲಡ್ ಶುಗರ್ ಕಡಿಮೆ ಮಾಡುತ್ತದೆ.2. ಬ್ಲಡ್ನಲ್ಲಿ ಕೊಲೆಸ್ಟ್ರಾಲ್ ಅಂಶವನ್ನ ಕಡಿಮೆ ಮಾಡುತ್ತದೆ.3. ಅಸಿಡಿಟಿಯನ್ನ ಕಡಿಮೆ ಮಾಡುತ್ತದೆ.4. ಅಜೀರ್ಣ ಸಮಸ್ಯೆಗೆ ಮುಕ್ತಿ ನೀಡುತ್ತದೆ.5. ತೂಕ ಇಳಿಸಲು ಸಹಕಾರಿ6. ಡಿಹೈಡ್ರೇಶನ್ ಕಡಿಮೆ ಮಾಡುತ್ತದೆ.7. ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಒದಗಿಸುತ್ತದೆ.8. ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.ಸೋ ಇಷ್ಟೆಲ್ಲಾ ಬೆನಿಫಿಟ್ಸ್ ಇರೋ ಮಜ್ಜಿಗೆಯನ್ನ ಯೋಚನೆ ಮಾಡದೇ ಕುಡಿದು ಆರೋಗ್ಯವಾಗಿರಿ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





