Breaking News

ಮೈತ್ರಿಯ ಮತ್ತೊಂದು ವಿಕೆಟ್ ಪತನ ನಿರೀಕ್ಷೆ

ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ರಾಜೀನಾಮೆ ಪರ್ವಕ್ಕೀಗ ಮತ್ತೊಂದು ಮೈತ್ರಿ ವಿಕೆಟ್ ಬೀಳುವ ನಿರೀಕ್ಷೆ ಇದೆ.‌
ಚಳ್ಳಕೆರೆ ಕಾಂಗ್ರೇಸ್ ಶಾಸಕ ಟಿ.ರಘುಮೂರ್ತಿ ರಾಜೀನಾಮೆ ಸಿಗುವ ‌ಸಾಧ್ಯತೆ ಹೆಚ್ಚಾಗಿದೆ.
ಚಿತ್ರದುರ್ಗ ಜಿಲ್ಲೆಯ ಮಾಜಿ ಸಚಿವ ಹೆಚ್. ಆಂಜನೇಯ ಅವರ ನಡತೆಗೆ ಬೇಸರಗೊಂಡ ರಘುಮೂರ್ತಿ ರಾಜೀನಾಮೆ ನೀಡಬಹುದೆಂಬ ಮಾಹಿತಿ ದೊರೆತಿದೆ. ‌
ಸಮುದಾಯದ ಕಡೆಗಣನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ತಮ್ಮದೇ ಸಮುದಾಯದ ಹೀರೋ ರಮೇಶ್ ಜಾರಕಿಹೊಳಿ ಆದೇಶದ ಮೇರೆಗೆ ರಾಜೀನಾಮೆ ನೀಡಬಹುದು ಎಂದು ಊಹಿಸಲಾಗಿದೆ.
ಈ ಕುರಿತು ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜ್ ಜತೆ ಮೊಬೈಲ್ ಸಂಭಾಷಣೆ ಕೇಳಿದ ಆಪ್ತರಿಂದಲೇ ಮಾಹಿತಿ ಬಹಿರಂಗವಾಗಿದ್ದು, ರಘುಮೂರ್ತಿ ಮೊಬೈಲ್ ನಾಟ್ ರೀಚಬಲ್ ಮಾಡಿಕೊಂಡಿರುವದು ಹೆಚ್ಚಿನ ಅನುಮಾನಕ್ಕೆ ಕಾರಣವಾಗಿದೆ.
ಈ ವಾರದಲ್ಲಿ ಶ್ರೀರಾಮುಲು ಜತೆ ಹೆಚ್ಚು ಮಾತನಾಡಿರುವ ಬಗ್ಗೆಯೂ ಮಾಹಿತಿ ಸೋರಿಕೆಯಾಗಿದೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *