ದೆಹಲಿ : ಭಾರತ ಅತಿ ಹೆಚ್ಚು ತೂಕದ ಜಿಸ್ಯಾಟ್-11 ಉಪಗ್ರಹವನ್ನು ಡಿಸೆಂಬರ್ 5 ರಂದು ತಡರಾತ್ರಿ 2 ಗಂಟೆ 8 ಸೆಕೆಂಡ್‌ಗಳಿಗೆ ಫ್ರಾನ್ಸ್ನ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ನಿನ್ನೆಯಷ್ಟೇ 31 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ-43 ಇಸ್ರೋ ನಭಕ್ಕೆ ಹಾರಿಸಿತ್ತು. ಇದ್ರ ಬೆನ್ನಲ್ಲೇ ಇದೀಗಾ ಹೆಚ್ಚು ತೂಕದ ಉಪಗ್ರಹಗಳ ಉಡಾವಣೆಗೆ ಮುಂದಾಗಿದೆ. ಜಿಸ್ಯಾಟ್-11 ಉಪಗ್ರಹ ಇಸ್ರೋದಿಂದ ನಿರ್ಮಿತವಾದ ಮೊಟ್ಟ ಮೊದಲ ವಿಶಾಲ ಹಾಗೂ ಅತಿ ಹೆಚ್ಚು ಭಾರದ ಸ್ವದೇಶಿ ನಿರ್ಮಿತ ಉಪಗ್ರಹ ಇದಾಗಿದೆ. ಒಟ್ಟು 5,854 ಕೆ.ಜಿ ತೂಕವಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ. ಇದರಿಂದ ಭೂಮಿಯ ವಿವಿಧ ರೀತಿಯ ಪೋಟೋಗಳನ್ನು ಪಡೆಯಬಹುದು. ಜಿಎಸ್ಎಟಿ-11 ಉಪಗ್ರಹದಿಂದ ಇಂಟರ್ನೆಟ್ ಸ್ಪೀಡ್ ಮತ್ತು ಬ್ರಾಡ್‌ಬಾಂಡ್ ಸ್ಪೀಡ್ ಹೆಚ್ಚಿಸಲು ಸಹಕಾರಿಯಾಗಿದೆ. ಇದಾದ ಬಳಿಕ ಜಿಎಸ್‌ಎಲ್‌ವಿ ಮೂಲಕ ಜಿಸ್ಯಾಟ್-7ಎ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ. ಜೊತೆಗೆ ಮುಂದಿನ ವರ್ಷದಲ್ಲಿ ಮಿಷನ್ ಚಂದ್ರಯಾನ-2ವನ್ನು ನಭಕ್ಕೆ ಹಾರಿಸಲಿದ್ದು, ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





