ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಭೇಟಿ ನೀಡಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಖುಸ್ಥಾಪನೆ ನೇರವೇರಿಸಿದ್ರು. ನಂತರ ನಗರದ ಗಬ್ಬೂರು ಕ್ರಾಸ್ ಬಳಿಯ ಕೆಎಲ್ಇ ಮೈದಾನದಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಬಹಿರಂಗ ಸಭೆಯಲ್ಲಿ ಮೋದಿ ಭಾಷಣ ಮಾಡಿದ್ರು. ಅಂದ್ಹಾಗೆ ಮೋದಿ ಭಾಷಣಕ್ಕೂ ಮುನ್ನ ಬಿಎಸ್ ಯಡಿಯೂರಪ್ಪ ಔಪಚಾರಿಕ ಭಾಷಣ ಮಾಡಿದ್ರು. ಇನ್ನು ಈ ಸಮಾವೇಶದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ರು.ಇನ್ನು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ತುಮಕೂರಿನ ಸಿದ್ದಗಂಗಾ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ್ ಸ್ವಾಮಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರು. ಅಲ್ಲದೇ ಸ್ಥಳೀಯ ಸಾಧಕರಾದ ಡಾ. ಗಂಗೂಬಾಯಿ ಹಾನಗಲ್, ಭಾರತ ರತ್ನ ಭೀಮಸೇನ್ ಜೋಶಿ, ವರಕವಿ ದ.ರಾ ಬೇಂದ್ರೆ ಮುಂತಾದವರನ್ನು ಪ್ರಧಾನಿ ಮೋದಿ ಸ್ಪರಿಸಿದ್ರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





