ಹುಬ್ಬಳ್ಳಿ: ರಾಜ್ಯಪಾಲರು ಅಸಂವಿಧಾನಿಕವಾಗಿ ಪ್ರಾಸಿಕ್ಯೂಷನ್ ಗೆ ಪರವಾನಿಗೆ ನೀಡಿದ್ದಾರೆ. ರಾಜಕೀಯ ಪ್ರೇರಿತವಾದ ರಾಜ್ಯಪಾಲರ ಅನ್ಯಾಯದ ಕ್ರಮ. ಇಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತಾ ಇದ್ದೇವೆ. ಕೇಂದ್ರ ಸಚಿವರು 10 ದಿನ ತಡಿರಿ ಸರ್ಕಾರ ಉಳಿಯೋದಿಲ್ಲ ಅಂತಾರೆ. ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ ಹೇಳ್ತಾರೆ. ಇವರೇನು ಭವಿಷ್ಯ ಹೇಳ್ತಾರಾ? ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡೊ ಪ್ರಶ್ನೆಯೇ ಹುಟ್ಟಲ್ಲ, ಇದು ಬಿಜೆಪಿ ನಾಯಕರು, ಸಿದ್ದರಾಮಯ್ಯ ವಿರೋಧಿಗಳು ಮಾಡಿರುವ ಷಡ್ಯಂತ್ರ. ಎಲ್ಲಾ ಮಂತ್ರಿಗಳು, ಶಾಸಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ಕೊಡ್ತಾ ಇದ್ದೇವೆ.ಕೇಂದ್ರ ಸರ್ಕಾರದ ಸಚಿವರು ರಾಜ್ಯಪಾಲರ ಮೇಲೆ ಒತ್ತಡ ತರೋದು ಜನರಿಗೆ ಗೊತ್ತಾಗಲ್ವಾ. ಮೈಸೂರಲ್ಲಿ ಸೇರಿದ ಜನ ನೋಡಿಯಾದ್ರೂ ರಾಜ್ಯಪಾಲರು ತಮ್ಮ ಕ್ರಮ ಬದಲಾಯಿಸಿಕೊಳ್ಳಬೇಕಿತ್ತು. 26ಕ್ಕೆ ದೂರು ನೀಡ್ತಾರೆ ಆವಾಗ್ಲೇ ನಮ್ಮಿಂದ ಉತ್ತರ ಹೋಗಿರುತ್ತೆ. ಅದೇ ರಾತ್ರಿ ತರಾತುರಿಯಲ್ಲಿ ಶೋಕಾಸ್ ನೋಟಿಸ್ ಕೊಡ್ತಾರೆ. ಕುಮಾರಸ್ವಾಮಿ, ಜೊಲ್ಲೆ, ನಿರಾಣಿ ಪ್ರಕರಣ ಗಮನಕ್ಕೆ ಬರಲಿಲ್ವ. ಸಿದ್ದರಾಮಯ್ಯ ಅವರನ್ನ ಗುರಿ ಮಾಡ್ತಾ ಇದ್ದಾರೆ ಎಂದರು.
ಐದು ಗ್ಯಾರೆಂಟಿ ಮೂಲಕ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾವು ಹೆಜ್ಜೆ ಇಡ್ತಾ ಇದ್ದೇವೆ. ಟ್ಯಾಕ್ಸ್ ನಮ್ಮ ಹಕ್ಕು ಅಂತ ನಮ್ಮ ಮುಖ್ಯಮಂತ್ರಿ ದಿಟ್ಟತನದಿಂದ ಹೇಳ್ತಾರೆ. ಒಕ್ಕೂಟ ರಾಜ್ಯ ವ್ಯವಸ್ಥೆಯಲ್ಲಿ ನಮ್ಮ ಹಕ್ಕು ಚಲಾಯಿಸಬಾರದಾ?.ನಾವು ಕಾನೂನಾತ್ಮಕ ಹೋರಾಟ ಮಾಡ್ತೇವೆ. ಸಿದ್ದರಾಮಯ್ಯ ರಾಜೀನಾಮೆ ಕೊಡೊ ಪ್ರಶ್ನೆಯೇ ಹುಟ್ಟಲ್ಲ, ಇದು ಬಿಜೆಪಿ ಅವರ ಕುತಂತ್ರ. 22ಕ್ಕೆ ಶಾಸಕಾಂಗ ಹಾಗೂ ಕ್ಯಾಬಿನೆಟ್ ಸಭೆ ಇದೆ. ಸಿದ್ದರಾಮಯ್ಯ ಅವರ ಹಿಂದೆ ನಾವು ಇದ್ದೇವೆ ಅನ್ನೋದು ಗೊತ್ತು. ಕುಮಾರಸ್ವಾಮಿ ಅವರೇ ನೀವು ಸಿದ್ದರಾಮಯ್ಯ ಅವರನ್ನ ಬ್ಲಾಕ್ ಮೇಲ್ ಮಾಡಿದ್ದೀರಿ ಕಿಡಿ ಕಾರಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

