Breaking News

ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ….

ಬೆಂಗಳೂರು: ಕೊಬ್ಬರಿ ದರ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ. ಸರಕಾರ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕ್ವಿಂಟಾಲ್‌ಗೆ 300 ರೂ. ಏರಿಕೆ ಮಾಡಿದ್ದು, ಉಂಡೆ ಕೊಬ್ಬರಿಗೆ 250 ರೂ. ಹೆಚ್ಚಿಸಿದ್ದು ಸ್ವಾಗತಾರ್ಹ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2024ರ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಏರಿಕೆಯನ್ನು ಅನುಮೋದಿಸಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *