ನವಜಾತ ಮಗು ನರ್ಸ್ ಸಹಾಯದಿಂದ ಒಂದು ಕಾಲನ್ನು ಮೇಲಕ್ಕೆತ್ತಿ ನಂತರ ಮತ್ತೊಂದನ್ನು ಮೇಲೆತ್ತುತ್ತಾ ನಡೆದಾಡಿದಿದೆ. ಹೌದು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗುವೊಂದು ನಡೆದಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬ್ರೆಜಿಲ್‍ನ ನಿವಾಸಿಯಾದ ಅರ್ಲೆಟ್ ಅರೆಂಟಿಸ್ ಎಂಬವರು ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.
ಆದ್ರೆ ಈ ವಿಡಿಯೋದಲ್ಲಿ ಮಗು ನಡೆದಿರುವುದು ದೊಡ್ಡ ಪವಾಡವೇನಲ್ಲ ಎಂದು ಹೇಳಲಾಗಿದೆ. ರೋಚೆಸ್ಟರ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾಲಯದ ಪ್ರಕಾರ, ಈ ನಡಿಗೆ ಪವಾಡವೇನಲ್ಲ. ಇದೊಂದು ನೈಸರ್ಗಿಕವಾದ ನವಜಾತ ಪ್ರತಿಫಲನ. ಇದನ್ನ ಸ್ಟಪ್ಪಿಂಗ್ ರಿಫ್ಲೆಕ್ಸ್ ಅಂತಾರೆ. ಮಗುವಿನ ಕಾಲು ನೆಲಕ್ಕೆ ಅಥವಾ ಯಾವುದೇ ಘನ ಮೇಲ್ಮೈಗೆ ಮುಟ್ಟುವಂತೆ ಅದನ್ನ ಎತ್ತಿ ಹಿಡಿದುಕೊಂಡಾಗ ಮಗು ನಡೆದಾಡುವಂತೆ ಅಥವಾ ಕುಣಿಯವಂತೆ ತೋರುವುದರಿಂದ,
ಇದನ್ನ ವಾಕಿಂಗ್ ಅಥವಾ ಡ್ಯಾನ್ಸ್ ರಿಫ್ಲೆಕ್ಸ್ ಎಂದು ಕೂಡ ಕರೆಯುತ್ತಾರೆ. ಮಗುವಿಗೆ 2 ತಿಂಗಳು ತುಂಬುವವರೆಗೆ ಈ ರಿಫ್ಲೆಕ್ಸ್ ಇರುತ್ತದೆ. ಮಗುವಿನ ಬೆಳವಣಿಗೆಗೆ ಇದು ಸಹಕಾರಿ ಎಂದು ಎನ್‍ಡಿಟಿವಿ ವರದಿ ಮಾಡಿದೆ. ಈ ವಿಡಿಯೋ ಮೇಲೆ ಈಗ ಮೀಮ್ಸ್ ಗಳು ಕೂಡ ಹರಿದಾಡ್ತಿದೆ. ಮಗುವಿನ ಹೆಸರು ಉಸೇನ್ ಬೋಲ್ಟ್ ಅಂತ ಕೆಲವರು ಜೋಕ್ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





