ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸ್ವಚ್ಚ ಸರ್ವೇಕ್ಷಣೆಯ ಹೆಸರಲ್ಲಿ ಅದೆಷ್ಟೋ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಆದರೆ ಇಲ್ಲಿನ ವಸ್ತು ಸ್ಥಿತಿ ನೋಡಿದರೇ ನಿಜಕ್ಕೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಷ್ಟಕ್ಕೂ ಏನಿದು ಸಮಸ್ಯೆ ಅಂತೀರಾ ತೋರಸ್ತಿವಿ ನೋಡಿ.. ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗ, ಟ್ರಾಫಿಕ್ ಐರ್ಲ್ಯಾಂಡ್ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ತ್ಯಾಜ್ಯ ಬಿದ್ದಲ್ಲಿಯೇ ಬಿದ್ದು, ದುರ್ವಾಸನೆ ಬೀರುತ್ತಿದೆ. ಹೀಗಿದ್ದರೂ ಪಾಲಿಕೆ ಮಾತ್ರ ಯಾವುದೇ ಕ್ರಮಗಳನ್ನು ಜರುಗಿಸುತ್ತಿಲ್ಲ. ಈ ನಡುವೆ ಪೌರ ಕಾರ್ಮಿಕರು ಹೋರಾಟದ ಹಾದಿ ಹಿಡಿದಿರುವುದು ನಿಜಕ್ಕೂ ಅವಳಿನಗರದ ಸ್ವಚ್ಚತೆಗೆ ಕೊಡಲಿ ಪೆಟ್ಟು ಹಾಕಿದಂತಾಗಿದೆ. ಫಾಗಿಂಗ್ ಮಾಡಿ ಡೆಂಗ್ಯೂ ನಿಯಂತ್ರಣ ಮಾಡಲು ನಿರ್ಧಾರ ಮಾಡಿದೇ ಆದರೆ ಸ್ವಚ್ಚತೆ ಮಾಡಿ ಫಾಗಿಂಗ್ ಮಾಡಿದರೇ ಯೂಸ್ ಫುಲ್ ಆಗುತ್ತದೇ. ಆದರೆ ಬೇಕಾಬಿಟ್ಟಿಯಾಗಿ ಕಸದ ರಾಶಿ ಬಿದ್ದಿದ್ದರೂ ಫಾಗಿಂಗ್ ಮಾಡಿದರೇ ನೋ ಯೂಸ್.. ಇನ್ನೂ ಸ್ವಚ್ಚತೆ ಕೋಟ್ಯಾಂತರ ರೂಪಾಯಿ ವ್ಯಯಿಸುವ ಪಾಲಿಕೆ ಈಗ ರೋಗ ಭೀತಿಯ ಪರಿಸ್ಥಿತಿಯಲ್ಲಿ ಜಾಣಮೌನ ವಹಿಸಿರುವುದು ನಿಜಕ್ಕೂ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಕಾರ್ಯಾಚರಣೆ ನಡೆಸಿ ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ.
Check Also
ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ
ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …
bigtvnews | Hubli Dharwad News | Kannada News | Karnataka News Hubli News | News In Hubli | Local news

