ಹಾನಗಲ್ ಗೆದ್ದಿದೀವಿ ಅನಿಸುತ್ತಿಲ್ಲ, ಮತದಾರರ ಬಗ್ಗೆ ನಂಬಿಕೆ ಇತ್ತು. ಕೊನೆಗೆ ಜನರು ಅವರಿಗೆ ಪಾಠಕಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಅವರ ಜೇಬಿಗೆ ಪಿಕ್ ಪಾಕೆಟ್ ಬಿದ್ದಿತ್ತು.
ನಾನು ಭಾಷಣ ಮಾಡುವ ವೇಳೆ ನಾನೇನು ಬೋಧನೆ ಮಾಡಿಲ್. ನಿಮಗೆ ಸಹಾಯ ಆಗಿದ್ಯಾ ಇಲ್ವಾ, ಆದಾಯ ಹೆಚ್ಚಾಗಿದಿಯಾ ಇಲ್ವಾ ಅಷ್ಟೇ ಕೇಳಿದ್ದು.ಅದಕ್ಕೆ ಈಗ ಜನರೇ ಉತ್ತರ ಕೊಟ್ಟಿದ್ದಾರೆ.
ಅಲ್ಲಿನ ಉತ್ತರಕ್ಕೆ ಈಗ ಸಿಎಂ ಪೆಟ್ರೋಲ್, ಡೀಸೆಲ್ ಇಳಿಸಿದ್ದಾರೆ ಎಂದು ಟೀಕಿಸಿದರು
ಇನ್ನು ಹಲವು ದಿನಸಿಗಳ ಮೇಲೆ ಇಳಿಕೆ ಆಗಬೇಕು. ನಾನು ದೇವರಿಗೆ ಬೇಡಿಕೊಂಡಿದ್ದೆ, ದೇವತೆಗೆ ಹೇಳಿಕೊಂಡಿದ್ದೆ.
ಭಕ್ತನಿಗೂ ದೇವರಿಗೂ ಇರುವ ವ್ಯವಹಾರ ಹೇಳೋಕೆ ಆಗಲ್ಲ.
ವೈಯಕ್ತಿಕವಾಗಿ ದೇವರಲ್ಲಿ ಬೇಡಿದ್ದೆ, ವರ ಕೊಟ್ಟಿದ್ದಾಳೆ ನನಗೆ ಎಂದರು.
ಸಿಎಂ ಕಾಂಗ್ರೆಸ್ ಬಗ್ಗೆ ಹೋಳಾಗುತ್ತಿದೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,
ಬಹಳ ಸಂತೋಷ ಅವರ ಹೇಳಿಕೆಗೆ. ಈ ಸೀಟ್ ವಿಶೇಷ ಏನೆಂದ್ರೆ ಜನತಾದಳ ಸೀಟ್ ಅವರು ಗೆದ್ದಿದ್ದಾರೆ.
ಬಿಜೆಪಿ ಸೀಟ್ ನಾವು ಗೆದ್ದಿದ್ದೇವೆ.
ಅವರೇ ಹೇಳಿದ್ದು, ನಾನು ಇಲ್ಲಿನ ಅಳಿಯ ಅಂತ, ಎಲ್ಲ ಸಚಿವರನ್ನ ಅವರೇ ಇಲ್ಲಿ ಬಿಟ್ಟುದ್ದು, ನಾನಲ್ಲ.ಚುನಾವಣೆ ಫಲಿತಾಂಶವೇ ತೈಲ ಬೆಲೆ ಇಳಿಕೆಗೆ ಕಾರಣ ಎಂದು ಕಿಡಿಕಾರಿದರು.
ಬಿಟ್ ಕ್ವಾಯಿನ್ ವಿಚಾರ, ಇಡಿ ಗೆ ಸಿಬಿಐ ಗೆ ಕೊಟ್ಟಿದೀವಿ ಅಂತ ಹೇಳ್ತಾರೆ. ಅವರೇ ಅದರ ಬಗ್ಗೆ ವಿವರಣೆ ಕೊಡಬೇಕು.
ನಾನು ಯಾವುದೇ ರಾಜಕಾರಣಿ ಬಗ್ಗೆ ಮಾತಾಡಿಲ್ಲ. ಪ್ರಕರಣ ತನಿಖೆ ಬಗ್ಗೆ ಸಾರ್ವಜನಿಕವಾಗಿ ಜನರಿಗೆ ಸ್ಪಷ್ಟಪಡಿಸಲಿ. ನಾವು ಸಹ ಆರ್ ಟಿ ಐ ಮೂಲಕ ಅರ್ಜಿ ಸಲ್ಲಿಸಲಿದ್ದೇವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

