Breaking News

ಭೀಕರ ರಸ್ತೆ ಅಪಘಾತ- ಸುಶಾಂತ್ ಸಿಂಗ್ ರಾಜಪೂತ್ ಕುಟುಂಬದ 6 ಜನರ ದುರ್ಮರಣ

ಬಿಹಾರ್ : ಬಿಹಾರದ ಲಖಿಸರಾಯ್ ಎಂಬಲ್ಲಿ ಟ್ರಕ್ ಮತ್ತು ಖಾಸಗಿ ವಾಹನವೊಂದರ ಮಧ್ಯ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ 6 ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಇವರೆಲ್ಲರವೂ ದಿವಂಗತ, ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ರಾಜಪೂತ್ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗಿದೆ. ಇವರೆಲ್ಲವೂ ಪಟ್ನಾದಲ್ಲಿ ನಡೆದಿದ್ದ ಅಂತೀಮ ಸಂಸ್ಕಾರದ ಕಾರ್ಯಕ್ರಮವನ್ನ ಪೂರೈಸಿಕೊಂಡು ಹುಟ್ಟೂರಿಗೆ ವಾಪಸಾಗುತ್ತಿದ್ದರು.

ಬಿಹಾರದ ಲಖಿಸರಾಯ್ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ಈ ಬೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 6 ಜನರ ದುರ್ಮರಣ ಮತ್ತು ಇನ್ನುಳಿದ ನಾಲ್ವರು ಗಂಬೀರವಾಗಿ ಗಾಯಗೊಂಡಿದ್ದಾರೆ.ಇವರೆಲ್ಲರೂ ದಿವಂಗತ ನಟ ಸುಶಾಂತ್ ಸಿಂಗ್ ರಾಜಪೂತ್ ಪರಿವಾರದವರಾಗಿದ್ದು, ಮೃತರಲ್ಲಿ ಲಾಲ್ ಜೀತ್ ಸಿಂಗ್ ಎಂಬುವವರು, ಪ್ರಖಾಂಡ್ ಕ್ಷೇತ್ರದ ಬಂಡಾರ್ ಎಂಬ ಪಟ್ಟಣದವರಾಗಿದ್ದಾರೆ. ಇವರು ತಮ್ಮ ಕುಟುಂಬದೊಂದಿಗೆ ಪಟ್ನಾ ನಗರದಲ್ಲಿಯೇ ವಾಸಿಸುತ್ತಲಿದ್ದರು.ಇನ್ನು ಮೂಲಗಳ ಪ್ರಕಾರ ಅಪಘಾತದಲ್ಲಿ ಮರಣ ಹೊಂದಿರುವ ಲಾಲ್ ಜೀತ್ ಸಿಂಗ್ ಎಂಬುವವರ ಪತ್ನಿಯೂ ನಿಧನ ಹೊಂದಿದ್ದು, ಅವರ ಅಂತೀಮ ವಿಧಿ ವಿಧಾನದ ಪಟ್ನಾದಲ್ಲಿಯೇ ಪೂರೈಸಿದ ನಂತರ ತಮ್ಮ ಪೂರ್ವಜರ ಊರಾಗಿರುವ ಬಂಡಾರ್ ಎಂಬಲ್ಲಿಗೆ ತೆರಳುತ್ತಲಿದ್ದರು.

ಸಾಂದರ್ಭಿಕ ಚಿತ್ರ

ಈ ವೇಳೆ ರಸ್ತೆ ಅಪಘಾತ ಸಂಭವಿಸಿದ್ದು, ಹೀಗಾಗಿ ಪೂರ್ತಿ ಪರಿವಾರವೇ ಅಪಘಾತಕ್ಕೆ ಈಡಾಗಬೇಕಾಯಿತು. ಇನ್ನು ವಾಹನದಲ್ಲಿ ಒಟ್ಟು ಹತ್ತು ಜನ ಪ್ರಯಾಣಿಸುತ್ತಿದ್ದು, ಅದರಲ್ಲಿ ಆರು ಜನರು ಸ್ಥಳದಲ್ಲಿಯೇ ಕೊನೆಯೂಸಿರು ಎಳೆದಿದ್ದು, ಉಳಿದವರ ಸ್ಥಿತಿ ಚಿಂತಾಜನವೆಂದು ಹೇಳಲಾಗಿದೆ.ಇನ್ನು ಅಪಘಾತದಲ್ಲಿ ಲಾಲ್ ಜೀತ್ ಸಿಂಗ್ ಸೇರಿದಂತೆ ಅವರ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಕೂಡ ಮೃತರಾಗಿದ್ದಾರೆ. ಜತೆಗೆ ಘಟನೆಯಲ್ಲಿ ವಾಹನ ಚಾಲಕ ಮತ್ತು ಸಂಬಂಧಿ ಮಹಿಳೆಯೂ ಕೂಡ ಮೃತರಾಗಿದ್ದಾರೆ.ಇನ್ನು ಲಖಿಸರಾಯ ಬಳಿಯ ಹಲಸಿ ಠಾಣಾ ವ್ಯಾಪ್ತಿಯ ಪಿಪ್ರಾ ಗ್ರಾಮದ ಬಳಿ ಅಂದರೆ ರಾಷ್ಟ್ರೀಯ ಹೆದ್ದಾರಿ 333ರಲ್ಲಿ ಈ ಅಪಘಾತ ಸಂಭವಿಸಿದ್ದು, ಮೂಲಗಳ ಪ್ರಕಾರ, ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್.ಪಿ ಗ್ಯಾಸ್ ನ ಟ್ರಕ್ ವೊಂದು ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಈ ವಾಹನ ಸ್ಟೋಟಗೊಂಡಿದ್ದು, ಏನಾಯ್ತು ಅನ್ನೋದನ್ನ ಯೊಚಿಸುವ ಮೊದಲೇ ಎಲ್ಲವೂ ಮುಗಿದು ಹೋಗಿತ್ತು.

ಸಧ್ಯ ಘಟನೆ ಸಂಬಂಧಿ ಸುದ್ದಿಯನ್ನ ತಿಳಿದು ಸಂಬಂಧಿಕರು ಮತ್ತು ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *