
ಹುಬ್ಬಳ್ಳಿ : ಬಂಗಾಳ ಕೊಲ್ಲಿ ವಾಯುಭಾರ ಕುಸಿತದಿಂದಾಗಿ ಕಳೇದೊಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು,ರಾಜ್ಯದಲ್ಲಿ ಕೂಡ ಮಳೆರಾಯನ ರೌದ್ರ ನರ್ತನ ಜೋರಾಗಿದೆ.ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೂಡ ಕಳೇದ ಮೂರ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಸಂಜೆಯಾಗುತ್ತಿದ್ದಂತೆ ಮಳೆರಾಯನ ಆರ್ಭಟ ಜೋರಾಗಿದೆ..
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಮೇರೆಗೆ ರಾಜ್ಯದಲ್ಲಿ ಇನ್ನೂ 2-3 ದಿನ ಭಾರಿ ಮಳೆಯಾಗುವ ಸಾದ್ಯತೆ ಇದೆ ಎಂದು ಮಾಹಿತಿ ನೀಡಿದೆ. ಸತತ ಮಳೆಯಿಂದಾಗಿ ಈಗಾಗಲೇ ಹಲವು ಅನಾಹುತ ಉಂಟಾಗಿವೆ.ಗುಡುಗು ಸಿಡಿಲಿನ ಆರ್ಭಟಕ್ಕೆ ಸಾವು ನೋವುಗಳು ಸಂಭವಿಸಿವೆ.. ಇನ್ನೂ ಮಳೆರಾಯ ಕಣ್ಣಾಮುಚ್ಚಾಲೆ ಆಟ ಆಡುತ್ತ ಸ್ವಲ್ಪ ಬಿಡುವು ಮತ್ತೆ ಆರ್ಭಟ ಮುಂದುವರೆಸಿದ್ದಾನೆ..ವಾಣಿಜ್ಯ ನಗರಿಯ ರಸ್ತೆಗಳಂತೂ ಮಾಯವಾಗಿ ಹೋಗಿವೆ.ಕೆಲ ಮನಗಳ ಗೋಡೆ ಕುಸಿದು ಜನರ ಬದುಕು ಬೀದಿಗೆ ಬಿದ್ದಿದೆ.
ಇನ್ನೂ ದೇಶದ ಬೆನ್ನೆಲುಬು ರೈತನಿಗೆ ಪ್ರತಿಬಾರಿ ಮಳೆ ಬಂದಾಗಲೂ ಕೂಡ ಸಂಕಷ್ಟಕ್ಕೆ ಒಳಗಾಗೊದು ರೈತ. ಬೆಳದ ಬೆಳೆಗಳು ಕೈಗೆ ಬರುವ ಸಮಯದಲ್ಲಿ ಮಳೆರಾಯನ ಅವಾಂತರದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಒಟ್ಟಿನಲ್ಲಿ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಸಾಕಷ್ಟು ಅನಾಹುತ ಸೃಷ್ಟಿಸಿದ್ದಂತು ಸತ್ಯ ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನು ಎರಡು ಮೂರು ದಿನ ಮಳೆಯಾಗುವ ಮುನ್ಸೂಚನೆ ನೀಡಿದ್ದು,ಮುಂದಿನ 48 ಗಂಟೆ ಮಳೆರಾಯನ ಆರ್ಭಟ ಕಾದು ನೋಡಬೇಕಿದೆ..
bigtvnews | Hubli Dharwad News | Kannada News | Karnataka News Hubli News | News In Hubli | Local news

