Welcome to bigtvnews   Click to listen highlighted text! Welcome to bigtvnews
Breaking News

ನ.25ರಂದು ಬಿಗ್ ಬಾಸ್ ಖ್ಯಾತಿಯ, ವಿಶ್ವನಾಥ ಮತ್ತು ಅವರ ತಂಡದ ಹೊಸ ಸಾಂಗ್ ರಿಲೀಸ್

ಧಾರವಾಡ : ಬಿಗ್ ಬಾಸ್ ಖ್ಯಾತಿಯ ಮತ್ತು ಅಪ್ಪಟ ಉತ್ತರ ಕರ್ನಾಟಕದ ಪ್ರತಿಬೆ ವಿಶ್ವನಾಥ ಹಾವೇರಿ ಹಾಗೂ ತಂಡದವರು ಹೊಸ ಗೀತೆಯೊಂದನ್ನ ರಚಿಸಿದ್ದು, ಈ ಅಲ್ಬಮ್ ಸಾಂಗ್ ಇದೇ ನ.25ರಂದು ಯ್ಯೂಟ್ಯೂಬ್ ಮೂಲಕ, ವಿಶ್ವದಾದ್ಯಂತ ರಿಲೀಸ್ ಮಾಡಲಾಗ್ತಿದೆ.

ವಿಶ್ವನಾಥ ಹಾಗೂ ತಂಡದವರ ಬಹುನಿರೀಕ್ಷಿತ ಈ ದೃಶ್ಯಕಾವವನ್ನ (ಹಾಡು) ಸ್ಯಾಮ್ಯುಯೆಲ್ .ಎನ್ ಬರೆದು , ಸಂಯೊಜೀಸಿದ್ದಾರೆ ಎಂದು ವಿಶ್ವನಾಥ ಹಾವೇರಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಸದಸ್ಯರು, ಧಾರವಾಡದ ಈ ಪುಣ್ಯ ಭೂಮಿಯೂ ಸಂಗೀತ ಕಲಾವಿದರ , ಕವಿಗಳ ತವರೂರು. ಗಂಗೂಬಾಯಿ ಹಾನಗಲ್ಲ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು ಅವರಂಥಹ ದಿಗ್ಗಜರು ನೆಲೆಸಿರುವಂತಹ ಬೀಡು. ಅವರೆಲ್ಲರೂ ಜಗತ್ತಿನಾದ್ಯಂತ ಈ ನಾಡಿನ ಕಿರ್ತಿಯನ್ನ ಹೆಚ್ಚಿಸಿದ್ದಾರೆ. ಅದರಲ್ಲಿ ಸಧ್ಯ ವಿಶ್ವನಾಥ ರವೀಂದ್ರ ಹಾವೇರಿ ಕೂಡ ಒಬ್ಬರಾಗಿದ್ದು, ನಾಡಿನ ಕಿರ್ತಿಯನ್ನ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ.

ಕಳೆದ ಹಲವಾರು ವರ್ಷಗಳಿಂದಲೂ ಸಂಗೀತ ಅಭ್ಯಾಸದಲ್ಲಿ ತೊಡಗಿರುವ ಗಾಯಕ ವಿಶ್ವನಾಥ, ರಾಜ್ಯದ ಹಲವು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನ ನಡೆಸಿಕೊಡುವ ಮೂಲಕ ವಿದ್ಯಾಕಾಶಿ ಧಾರವಾಡದ ಕಿರ್ತಿಯನ್ನ ಹೆಚ್ಚಿಸಿದ್ದಾರೆ.

ಇದಲ್ಲದೇ ಖಾಸಗಿ ವಾಹಿನಿ ನಡೆಸಿ ಕೊಡುವ ಎರಡು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ, ವಿಶ್ವನಾಥ ಕರ್ನಾಟಕದಾದ್ಯಂತ ಚಿರಪರಿಚಿತರೂ ಆಗಿ ಹೊರ ಹೊಮ್ಮಿದ್ದರು. ಅಲ್ಲದೇ ಅತೀ ಹೆಚ್ಚು ಟಿಆರ್.ಪಿ ಹೊಂದಿರುವ ಪ್ರಖ್ಯಾತ ಶೋ, ಬಿಗ್ ಬಾಸ್ ಸಿಸನ್ 8ರಲ್ಲಿ ಭಾಗ ವಹಿಸುವ ಮೂಲಕ ಅತ್ಯಂತ ಕಿರಿಯ ಸ್ಪರ್ಧಿ ಎನ್ನುವ ಖ್ಯಾತಿಗೂ ವಿಶ್ವನಾಥ ಪಾತ್ರರಾಗಿದ್ದರು.

ಈಗ ರಿಯಾಜ್ ಎಮ್.ಎನ್ ಚಿತ್ರೀಕರಣ ಮಾಡಿ, ಪ್ರಸಾದ ಮಹಾದೇವ ನಿರ್ದೇಶನದಲ್ಲಿ ಮೌನಾ ಗುಡ್ಡಮನೆ ಜೊತೆ ವಿಶ್ವನಾಥ ಹಾವೇರಿ ಹಾಡಿ ನಟಿಸುತ್ತಿದ್ದಾರೆ. ಹೀಗಾಗಿ ನಾಡಿನ ಜನತೆ ವಿಶ್ವನಾಥ ಅವರಂತಹ ಅಪ್ಪಟ ಪ್ರತಿಭೆಯನ್ನ ಪ್ರೋತ್ಸಾಹಿಸ ಬೇಕಿದೆ ಎಂದು ಚಿತ್ರ ತಂಡ ಹೇಳಿದೆ.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಡಾ. ಪ್ರಶಾಂತ್ ರಾಮನಗೌಡ, ಸ್ಯಾಮ್ಯಯೆಲ್ ರಿಯಾಜ ಎಂ ಎನ್ ಉಪಸ್ಥಿತರಿದ್ದರು.

Spread the love

About admin

Check Also

ಅಹಿತಕರ ಘಟನೆಗಳನ್ನು ತಡೆಯುವ ದೃಷ್ಟಿಯಿಂದ ಹೊಸ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ-

ಹುಬ್ಬಳ್ಳಿ: ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಹಾಗೂ ಸಂಭಾವ್ಯ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸ್ ಇಲಾಖೆಯಿಂದ ಖಾಸಗಿ …

Leave a Reply

Your email address will not be published. Required fields are marked *

You cannot copy content of this page
Click to listen highlighted text!