ಬೆಳಗಾವಿ: ಸಂಚಾರ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಸರ್ಕಾರಿ ಬಸ್ ನಿರ್ವಾಹಕ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿರುವ ಘಟನೆ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ನಡೆಯಿತು. ಬಸ್ ನಿಲ್ಲಿಸುವ ವಿಚಾರಕ್ಕೆ ಇಬ್ಬರು ಸಾರ್ವಜನಿಕವಾಗಿ ಬಡಿದಾಡಿಕೊಂಡಿದ್ದಾರೆ.
ಬಿ.ಕೆ.ಕಂಗ್ರಾಳಿಯಿಂದ ಸಿಬಿಟಿಗೆ ಬಸ್ ತೆರಳುತ್ತಿತ್ತು. ಚನ್ನಮ್ಮ ವೃತ್ತದ ಸಿಗ್ನಲ್ ಮಧ್ಯೆ ಬಸ್ ನಿಲ್ಲಿಸಿ ಪ್ರಯಾಣಿಕರ ಇಳಿಸಲಾಗುತ್ತಿತ್ತು. ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದ್ದನ್ನು ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಪ್ರಶ್ನಿಸಿದ್ದಾರೆ. ಆಗ ಚಾಲಕ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡು ಕಾನ್ಸ್‌ಟೇಬಲ್ ನಿರ್ವಾಹಕನಿಗೆ ಸಾರ್ವಜನಿಕವಾಗಿ ಕಪಾಳಕ್ಕೆ ಹೊಡೆದಿದ್ದಾರೆ. ಆಗ ನಿರ್ವಾಹಕ ಕೂಡ ಕಾನ್ಸ್‌ಟೇಬಲ್‌ಗೆ ಬಾರಿಸಿ ಇಬ್ಬರು ಬೈದಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ಜಗಳ ಬಗೆಹರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

