ಹುಬ್ಬಳ್ಳಿ- ಮತಾಂತರ ನಿಷೇಧ ಕಾಯ್ದೆಗೆ ಸಂಭಂದಿಸಿದಂತೆ ಯಾರೇ ಆಗಲಿ ಬಲವಂತವಾಗಿ ಮತಾಂತರ ಮಾಡಿದ್ರೆ ಕಾನೂನು ಮತ್ತು ವೈಯಕ್ತಿಕವಾಗಿ ವಿರೋಧವಿದೆ ಎಂದು ಎಂ ಎಲ್ ಸಿ ತಾರಾ ಹೇಳಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮತಾಂತರ ಅನ್ನೋದು ನಾವು ಹುಟ್ಟಿನಿಂದ ಬಂದ ಧರ್ಮವೇ ಆಗಿರುತ್ತದೆ.ಆದ್ರೆ ಯಾರದ್ದೊ ಬಲವಂತಕ್ಕಾಗಿ ಅಥವಾ ಎಮೋಷನಲ್ ಬ್ಲಾಕ್ಮೇಲ್ ಆಗಲಿ ಅಥವಾ ಬೇರೆ ಬೇರೆ ಅನುಕೂಲ ಮಾಡೋದಾಗಿ ಆಸೆ,ಆಮಿಷ ತೋರಿಸಿ ಮತಾಂತರ ಮಾಡೋದು ಕಾನೂನಿಗೆ ವಿರುದ್ಧವಾಗಿದೆ.ಅಂತಹ ಕೆಲಸಕ್ಕೆ ಯಾರಾದ್ರು ಕೈ ಹಾಕಿದ್ರೆ ಅವರು ಶಿಕ್ಷೆಗೆ ಅರ್ಹ ಎನ್ನುವುದು ನಮ್ಮ ಆಸೆ ಎಂದರು.ಎಲ್ಲರಿಗೂ ವೈಯಕ್ತಿಕ ನಿರ್ಧಾರ ಇರುತ್ತೇ ಆದ್ರೆ ಯಾರದೋ ಬಲವಂತಕ್ಕೆ ಒಳಗಾಗಬಾರದು ಅನ್ನೋದ ಸರ್ಕಾರದ ಕಾಳಜಿಯಾಗಿದೆ.ಬಲವಂತವಾಗಿ ಮತಾಂತರ ಮಾಡೊರ ವಿರುದ್ದ ಈ ಕಾಯ್ದೆ ಜಾರಿ ಆಗುತ್ತಿದೆ.ಕಾಂಗ್ರೆಸ್ ಪ್ರತಿಭಟನೆ ಮಾಡೋದು ಅವರ ವೈಯಕ್ತಿಕ ವಿಚಾರವಾಗಿದೆ,ಸರ್ಕಾರ ಯಾವುದೇ ಕುಟುಂಬ ಅಥವಾ ವೈಯಕ್ತಿಕ ವಿಚಾರಕ್ಕೆ ಕೈ ಹಾಕಿಲ್ಲ.ಈ ವಿಚಾರದಲ್ಲಿ ಎನ್ ಆರ್ ಐ ಗಳ ಕೈವಾಡವಿದೆ ಎಂದರು.ಜೊತೆಗೆ ಬೇರೆ ಬೇರೆ ದೇಶಗಳ ಹಣ ಸಹಾಯ ಆಗ್ತಿದೆ ಅನ್ನೊ ಮಾಹಿತಿ ಇದೆ ರೀತಿ ಇದ್ದರೂ ಇರಬಹುದು ಮತ್ತು ಮತಾಂತರ ಆದವರು ಯಾರೇ ಇರಲಿ ಅವರು ಮತ್ತೇ ಅವರ ಧರ್ಮಕ್ಕೆ ಹೋಗೋಕೆ ಸ್ವತಂತ್ರ ಇದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

