Breaking News

ಪಂಜಾಬ್ ಚುನಾವಣೆ 2022: 15 ಸ್ಥಾನಗಳಿಗೆ ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚಂಡೀಗಢ : ಪಂಜಾಬ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 15 ಅಭ್ಯರ್ಥಿಗಳಿಗೆ ಪಕ್ಷದಲ್ಲಿ ಟಿಕೆಟ್ ನೀಡಲಾಗಿದೆ. ಇದರಲ್ಲಿ ಪ್ರಮುಖವಾದ ಹೆಸರು ಡಾ.ಚರಂಜಿತ್ ಸಿಂಗ್ ಅವರದ್ದು.

ಚಮ್ಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎಎಪಿ ಡಾ.ಚರಂಜಿತ್ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಪ್ರಸ್ತುತ ಪಂಜಾಬ್‌ನ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್‌ನ ಶಾಸಕರಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯ ಡಾ.ಚರಂಜಿತ್ ಸಿಂಗ್ ಕಾಂಗ್ರೆಸ್ ನ ಚರಂಜಿತ್ ಸಿಂಗ್ ಚನ್ನಿ ವಿರುದ್ಧ ಚಮಕೌರ್ ಸಾಹಿಬ್ ನಿಂದ ಕಣಕ್ಕಿಳಿಯಲಿದ್ದಾರೆ.

ಆಮ್ ಆದ್ಮಿ ಪಕ್ಷವು ಈ ಹಿಂದೆ ಡಿಸೆಂಬರ್ 26 ರಂದು 15 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರ ನಂತರ ಇಂದು 15 ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಆಮ್ ಆದ್ಮಿ ಪಕ್ಷ ಬಿಡುಗಡೆ ಮಾಡಿರುವ ಐದು ಪಟ್ಟಿಗಳಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಗೆ ಇದುವರೆಗೆ 88 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಪಂಜಾಬ್‌ನಲ್ಲಿ 117 ವಿಧಾನಸಭಾ ಸ್ಥಾನಗಳಿವೆ. ಈಗ ಎಎಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲು 29 ಸ್ಥಾನಗಳು ಬಾಕಿ ಉಳಿದಿವೆ.

ಪಂಜಾಬ್‌ನಲ್ಲಿ 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತವನ್ನು ಪಡೆದಿತ್ತು. ಜೊತೆಗೆ ಆಮ್ ಆದ್ಮಿ ಪಕ್ಷವು ಉತ್ತಮ ಪ್ರದರ್ಶನ ನೀಡಿತ್ತು. ರಾಜ್ಯದಲ್ಲಿ 20 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಚುನಾವಣೆಯಲ್ಲಿ ಎಎಪಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಪಕ್ಷದಲ್ಲಿ ಒಗ್ಗಟ್ಟು ಕಾಪಾಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 20 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುವ ಎಎಪಿ ಈ ಚುನಾವಣೆಯ ಮೂಲಕ ಶಾಸಕರ ಸಂಖ್ಯೆಯನ್ನು 11 ಕ್ಕೆ ಇಳಿಸಿದೆ. ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ನಲ್ಲಿ ಕಳೆದ ಒಂದು ವರ್ಷದಿಂದ ನಾಯಕರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಎಎಪಿ ಕಾಂಗ್ರೆಸ್‌ನ ಈ ಕಗ್ಗಜಗ್ಗಾಟದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ ಮತ್ತು ಈ ಬಾರಿ ಪಂಜಾಬ್‌ನ ಅಧಿಕಾರವನ್ನು ಪಡೆಯಲೇಬೇಕು ಎನ್ನುವ ಪಣ ತೊಟ್ಟಿದೆ. ಇದಕ್ಕಾಗಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನಿರಂತರವಾಗಿ ಪಂಜಾಬ್ ಪ್ರವಾಸ ಮಾಡುತ್ತಿದ್ದಾರೆ.

ಆಮ್ ಆದ್ಮಿ ಪಕ್ಷವು 2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಗೆ 15 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಪಕ್ಷ ಫತೇಘರ್ ಸಾಹಿಬ್‌ನಿಂದ ಲಖ್ಬೀರ್ ಸಿಂಗ್ ರೈ, ಫಿರೋಜ್‌ಪುರ ಗ್ರಾಮಾಂತರದಿಂದ ಅಶು ಬಂಗೇರ್, ಭೋಲಾನಾಥ್‌ನಿಂದ ರಂಜಿತ್ ಸಿಂಗ್ ರಾಣಾ, ಹಕಮ್ ನಕೋದರ್‌ನಿಂದ ಇಂದರ್ಜಿತ್ ಕುಮಾರ್ ಮಾನ್, ರಾಯ್ಕೋಟ್‌ನಿಂದ ಸಿಂಗ್ ತೆಕೇದಾರ್ ಮತ್ತು ಧರ್ಮಕೋಟ್‌ನಿಂದ ದೇವಿಂದರ್ ಸಿಂಗ್ ಲಡ್ಡಿ ಧೋಸ್ ಅವರನ್ನು ಕಣಕ್ಕಿಳಿಸಿದೆ.

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *