Breaking News

ಶ್ರೀರಾಮ ಸೇನೆಗೆ ತಿರುಗೇಟು ನೀಡಿದ ಅಬ್ಬಯ್ಯ

ಹುಬ್ಬಳ್ಳಿ: ಮಂಟೂರ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಶ್ರೀರಾಮ ಸೇನೆಯ ಮಾತು ಕೇಳುವ ಅವಶ್ಯಕತೆಯಿಲ್ಲ. ಅಲ್ಲಿನ ಜನರ ಅಭಿಪ್ರಾಯ ಆಧರಿಸಿ ಮುಂದುವರೆಯಲಾಗುವುದು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಶ್ರೀರಾಮ ಸೇನೆಗೆ ತಿರುಗೇಟು ನೀಡಿದರು.

ನಗರದಲ್ಲಿ ಮಾತನಾಡಿದ ಅವರು,ಜನರು ಬೇಡ ಅಂದ್ರೆ ಬೇರೆ ಕಡೆಗೆ ಸ್ಥಳಾಂತರ ಮಾಡುತ್ತೇವೆ. ಅಲ್ಲಿಯೇ ಇರಲಿ ಎಂದರೆ ಅಲ್ಲಿಯೇ ಮುಂದುವರೆಸುತ್ತೇವೆ ಇನ್ನು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಅವರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ ಅಬ್ಬಯ್ಯ, ಅವನು ಕೂಡಾ ನನಗೆ ಅಬ್ದುಲ್ ನೋ? ಅಬ್ಬಯ್ಯ ನೋ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ. ಮೊದಲು ಅವರು ಕ್ಷಮೆ ಯಾಚನೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಹತ್ಯೆಯಾದ ಅಂಜಲಿ ಕುಟುಂಬಕ್ಕೆ ಸರ್ಕಾರ ಹಾಗೂ ವೈಯಕ್ತಿಕವಾಗಿ ಆ ಕುಟುಂಬಕ್ಕೆ ಯಾವ ರೀತಿಯ ಪರಿಹಾರ ಕ್ರಮವನ್ನು ಮಾಡಬೇಕು ಅವೆಲ್ಲವನ್ನೂ ಮಾಡಿದ್ದೇನೆ. ಇವರನ್ನು ಕೇಳಬೇಕಿಲ್ಲ ಎಂದು ಶಾಸಕರು ಹರಿಹಾಯ್ದರು. ವಿರೋಧಿಗಳು ನನ್ನ ವಿರುದ್ಧ ಬೋಗಸ್ ವಿಚಾರಗಳನ್ನು ಹೇಳಿ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹರಿಹಾಯ್ದರು.

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *