ಧಾರವಾಡ : ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಜೆಡಿಎಸ್ ಯುವ ಮುಖಂಡ ಅತ್ಬಾಬ್ ಬೇಪಾರಿ ನೇತೃತ್ವದಲ್ಲಿ ಧಾರವಾಡ ಮನಕಿಲ್ಲಾದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.
ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಶಿಬಿರ ನಡೆಸಿಕೊಟ್ಟರು. ಅದರಂತೆ ರೋಟರಿ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಶ್ರೀಕಾಂತ್ ಅಪ್ಟೆ, ವೈದ್ಯಾಧಿಕಾರಿಗಳಾದ ಡಾ. ನಂದೀಶ್ ಎಂ, ಸಿಬ್ಬಂದಿ ಸಂತೋಷ , ಅರುಣ್ , ನಿಂಗನಗೌಡ, ವಾಣೀಶ್ರೀ ರಕ್ತ ಪರಿಕ್ಷಿಸಿ ಯಶಸ್ವಿಯಾಗಿ ರಕ್ತ ದಾನ ಶಿಬಿರ ನಡೆಸಿಕೊಟ್ಟರು.
ಮುಜ್ಜಮೀಲ್ ಕಲಾದಗಿ, ಅಹಮದ್ ರಜಾ ಟಿನವಾಲೆ, ಆರೀಫ್ ಹೊಳಿ, ಮುಸಾದಿಕ್ ಗಂಜಿಗಟ್ಟಿ ಸೇರಿದಂತೆ ಅನೇಕರು ರಕ್ತದಾನ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





