Breaking News

ಆರ್.ವಿ.ದೇಶಪಾಂಡೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ನಡೆಸಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವ್ರು ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ನಡೆಸಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.ಮೊದಲಿಗೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗೇಟ್‍ನಲ್ಲಿ ಸ್ಥಳೀಯ ಮುಖಂಡರಿಂದ ಸ್ವಾಗತ ಸ್ವೀಕರಿಸಿದ ಸಚಿವರು, ಬಳಿಕ ತುಂಬಿದ ಬೆಂಡರವಾಡಿ ಕೆರೆಯನ್ನು ವೀಕ್ಷಿಸಿದ್ರು. ನಂತ್ರ ಬದನಗುಪ್ಪೆ ಗ್ರಾಮದ ರೈತ ನಾಗರಾಜು ಎಂಬುವವರಿಗೆ ಸೇರಿದ, ಮಳೆಗೆ ನೆಲಕಚ್ಚಿದ ಬಾಳೆ ಬೆಳೆಯನ್ನು ವೀಕ್ಷಿಸಿ, ಸ್ಥಳದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ರೈತ ನಾಗರಾಜು, ಜಿಲ್ಲಾಧಿಕಾರಿ ಕಾವೇರಿಯವರೊಂದಿಗೆ ಚರ್ಚಿಸಿ, ಪರಿಹಾರಕ್ಕೆ ಸೂಚಿಸಿದ್ರು.ನಂತ್ರ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಚಿವ ದೇಶಪಾಂಡೆ, ಅಧಿಕಾರಿಗಳ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ರು. ಈ ವೇಳೆ ಪೂರ್ವ ಮುಂಗಾರಿನಲ್ಲಿ ಆಗಿರುವ ಬಿತ್ತನೆ, ಈಗ ಮುಂಗಾರಿಗೆ ನಡೆದಿರುವ ಸಿದ್ಧತೆ, ಕೃಷಿ ಇಲಾಖೆಯ ಬಿತ್ತನೆ ಮತ್ತು ರಸಗೊಬ್ಬರ ದಾಸ್ತಾನು, ತೋಟಗಾರಿಕೆ ಬೆಳೆಗಳ ಸ್ಥಿತಿಗತಿ, ಪಂಚಾಯತ್ ರಾಜ್ ಇಲಾಖೆಯಿಂದ ಕುಡಿಯುವ ನೀರಿನ ಅಭಾವ ತಗ್ಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದು, ಅಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಿದ್ರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ರು.ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ದೇಶಪಾಂಡೆ, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಸರ್ಕಾರವೂ ಬರ ನಿರ್ವಹಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೂ ಹಣ ನೀಡಲಾಗಿದೆ. ರಾಜ್ಯದಲ್ಲಿ ಇಷ್ಟೊತ್ತಿಗಾಗಲೇ ಸಮರ್ಪಕ ಮಳೆಯಾಗಬೇಕಿತ್ತು. ಆದ್ರೆ ಮಳೆ ಕೊರತೆಯಾಗಿರುವುದರಿಂದ ಜುಲೈ ತಿಂಗಳಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬರದಿಂದಾಗಿ 395 ಎಕರೆಯಷ್ಟು ಬೆಳೆ ನಾಶವಾಗಿದೆ. ಇದಕ್ಕೆ ಶೇ.35 ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿರುವುದೇ ಕಾರಣವಾಗಿದೆ ಎಂದ್ರು.

Share News

About admin

Check Also

ಮಹದೇಶ್ವರ ದೇಗುಲದ ಗೋಪುರ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!!

ಮಲೆ ಮಹದೇಶ್ವರ ದೇಗುಲದ ಗೋಪುರವನ್ನು ಹತ್ತಿ ವ್ಯಕ್ತಿಯೊಬ್ದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.ಅರೆಬರೆ ಬಟ್ಟೆಯಲ್ಲಿರುವ ವ್ಯಕ್ತಿಯೊಬ್ಬ ಗೋಪುರವನ್ನು …

Leave a Reply

Your email address will not be published. Required fields are marked *