ಮಂಡ್ಯ : ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಿಂದಲೇ ಬಿಸಿ ಊಟದ ಬೇಳೆ ಸಾಗಾಣಿಕೆ ಮತ್ತು ಮಾರಾಟ ಮಾಡುತ್ತಿರುವ ವಿಚಾರವಾಗಿ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಳವಳ್ಳಿ ತಾಲ್ಲೂಕ್ಕಿನ ಮಾರಗೌಡನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕಾಳರಾಜೇಗೌಡ ಬಿಸಿಊಟದ ಬೇಳೆಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿ ಮಾರಾಟ ಮಾಡಿರುವ ಬಗ್ಗೆ ದೂರು ದಾಖಲಾಗಿದ್ದು, ಈತ ಬೇಳೆಯನ್ನು ಎಚ್ ಬಸಾಪುರದ ಹೊನ್ನೇಗೌಡ ಎಂಬುವರಿಗೆ ಮಾರಾಟ ಮಾಡಿ ಆಟೋವೊಂದರಲ್ಲಿ ಸಾಗಾಣಿಕೆ ಮಾಡುವ ವಿಚಾರ ಬೆಳಕಿಗೆ ಬಂದಿದೆ. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಜಯಪ್ರಕಾಶ್ ದೂರಿನ ಆಧಾರದ ಮೇಲೆ ಮುಖ್ಯ ಶಿಕ್ಷಕ ಕಾಳ ರಾಜೇಗೌಡ, ಆಟೋ ಚಾಲಕ ಹಾಗೂ ಬೇಳೆ ಖರೀದಿಸಿದ್ದ ಹೊನ್ನೇಗೌಡರ ವಿರುದ್ಧ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





