Breaking News

ಬಸ್ ಆಟೋಗೆ ಡಿಕ್ಕಿ : 2 ಸಾವು


ವಿಜಯನಗರ: ಚಲಿಸುತ್ತಿದ್ದ ಸಾರಿಗೆ ಬಸ್ ಟೈರ್​ ಬ್ಲಾಸ್ಟ್ ಆದ ಪರಿಣಾಮ, ನಿಯಂತ್ರಣ ತಪ್ಪಿದ ಬಸ್ ಆಟೋಗೆ ಡಿಕ್ಕಿ ಹೊಡೆದ ಘಟನೆ ಕೂಡ್ಲಿಗಿ ತಾಲೂಕಿನ ಕುಪ್ಪಿನಕೆರೆ ಕ್ರಾಸ್ ಬಳಿ ನಡೆದಿದೆ.

ಪದವಿ ವಿದ್ಯಾರ್ಥಿ ಪುಷ್ಪಲತಾ (20), ಮೀನಾಕ್ಷಿ (38) ಮೃತ ದುರ್ದೈವಿಗಳು. ಆಸ್ಪತ್ರೆ ಸಾಗಿಸೋ ಮಾರ್ಗ ಮಧ್ಯೆ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಕೂಡ್ಲಿಗಿಯಿಂದ ಬಳ್ಳಾರಿ ಕಡೆ ಹೊರಟಿದ್ದ ಕೆಎಸ್​​ಆರ್​ಟಿಸಿ ಬಸ್ ಟೈರ್ ಬ್ಲಾಸ್ಟ್ ಆಗಿದ್ದು, ಕೂಡ್ಲಿಗಿ ಕಡೆಯಿಂದ ಈಚಲಬೊಮ್ಮನಹಳ್ಳಿ ಕಡೆ ಹೊರಟಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ರಮೇಶ್ (28), ಗೌಡ್ರ ಈರಣ್ಣ (65), ಅಭಿಷೇಕ್ (20) ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೂಡ್ಲಿಗಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *