ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಗೋರಖ್ ಪುರ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಯೋಗಿ ಆದಿತ್ಯನಾಥ್ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ 1.5 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.ಸ್ವ ಘೋಷಿತ ಆಸ್ತಿ ಪ್ರಕಾರ ಯೋಗಿ ಆದಿತ್ಯನಾಥ್ ಆಸ್ತಿ 1,54,94,054 ರೂ. ಆಗಿದೆ. ಇದರಲ್ಲಿ ಕೈಯಲ್ಲಿರುವ ನಗದು, 6 ಬ್ಯಾಂಕ್ ಖಾತೆಗಳಲ್ಲಿ ಇರುವ ಮೊತ್ತವೂ ಸೇರಿದೆ.
12 ಸಾವಿರ ರೂ. ಮೌಲ್ಯದ ಸ್ಯಾಮ್ ಸಂಗ್ ಮೊಬೈಲ್, 1,00,000 ರೂ. ಮೌಲ್ಯದ ರಿವಾಲ್ವರ್ ಮತ್ತು 80 ಸಾವಿರ ರೂ. ಮೌಲ್ಯದ ರೈಫಲ್ ಇದೆ. ಯೋಗಿ ಆದಿತ್ಯನಾಥ್ ಅವರ ಆಸ್ತಿ 2021ರಲ್ಲಿ 13,20,643 ರೂ. ಆಗಿದೆ. ಆದರೆ 2019-20ನೇ ಸಾಲಿಗೆ ಹೋಲಿಸಿದರೆ 15,68,799 ರೂ.ಗಿಂತ ಕಡಿಮೆ ಆಗಿದೆ. ಯೋಗಿ ಆದಿತ್ಯನಾಥ್ ಬಳಿ ಯಾವುದೇ ಕೃಷಿ ಅಥವಾ ಕೃಷಿಯೇತರ ಸ್ವಂತ ಭೂಮಿ ಇಲ್ಲ. ಅಲ್ಲದೇ ಸ್ವಂತ ವಾಹನ ಅಥವಾ ಸಾಲ ಇಲ್ಲ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರದ ನಡುವೆ ಯೋಗಿ ಆದಿತ್ಯನಾಥ್ ನಾಮಪತ್ರ ಸಲ್ಲಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

