Breaking News

ಯುಕ್ರೇನ್ ನಿಂದ ಮರಳಿ ತವರಿಗೆ ಸೇರಿದ ಬೀದರ್ ವಿದ್ಯಾರ್ಥಿಗಳು

ಬೀದರ್: ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿರುವ ಗಡಿ ಜಿಲ್ಲೆಯ ನಾಲ್ವರು ವೈದ್ಯ ವಿದ್ಯಾರ್ಥಿಗಳ ಪೈಕಿ ಇಬ್ಬರು ಶನಿವಾರ ಸ್ವದೇಶಕ್ಕೆ ಆಗಮಿಸಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ಸಹ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸುಪರ್ದಿಯಲ್ಲಿ ಸುರಕ್ಷಿತವಾಗಿದ್ದಾರೆ.

ಹೀಗಾಗಿ ತೀವ್ರ ಆತಂಕದಲ್ಲಿದ್ದ ಮಕ್ಕಳ ಪಾಲಕರು ಈಗ ನಿಟ್ಟಿಸಿರುಬಿಟ್ಟಿದ್ದಾರೆ.ಉಕ್ರೇನ್‌ನ ಖಾರ್ಕೀವ್ ನಗರದ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆಯ 4 ಜನ ವಿದ್ಯಾರ್ಥಿಗಳು ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿಯೇ ಸಿಲುಕಿದ್ದರು.ನಗರದ ಮಂಗಲಪೇಟ್ ನಿವಾಸಿ ಅಮೀತ್ ಸಿರಂಜೆ ಅವರು ಶನಿವಾರ ಸಂಜೆ 6 ಕ್ಕೆ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *