ಚಿಕ್ಕಬಳ್ಳಾಪುರ: ಭಯೋತ್ಪಾದನೆಗೆ ಪಿತೂರಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಬಿಹಾರ ಮೂಲದ 25 ವರ್ಷದ ಸಲಾಮಿನ್‌ನನ್ನು ಬಂಧಿಸಿದ್ದಾರೆ. ಹಿಂದೆ ಬಂಧಿತನಾಗಿದ್ದ ಶಬ್ಬೀರ್ ನೀಡಿದ ಮಾಹಿತಿ ಆಧರಿಸಿ ಸಲಾಮಿನ್‌ನನ್ನು ಬಂಧಿಸಲಾಗಿದೆ. ಶಬ್ಬೀರ್‌ನ ಟೆಲಿಗ್ರಾಂ ಗ್ರೂಪ್‌ನಲ್ಲಿ ಸಲಾಮಿನ್ ಸಕ್ರಿಯವಾಗಿದ್ದ ಎನ್ನಲಾಗಿದ್ದು, ಸೆ.24ರಂದು ಅರಕಲಗೂಡಿಗೆ ಬಂದಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಶಬ್ಬೀರ್‌ನ ಮೊಬೈಲ್ ಪರಿಶೀಲನೆ ವೇಳೆ ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂನಲ್ಲಿ ಪ್ರಚೋದನಕಾರಿ ಸಂದೇಶಗಳು ಪತ್ತೆಯಾಗಿದ್ದವು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳ ಸಾಮಾಜಿಕ ಜಾಲತಾಣ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

