ಧಾರವಾಡ: ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ದೀನದಯಾಳ ಅಂತ್ಯೋಂದಯ ಯೋಜನೆಯ ಧಾರವಾಡದಲ್ಲಿ ಮದಿಹಾಳದ ಜೋಶಿ ಭವನದಲ್ಲಿ ಸ್ವ ಸಹಾಯ ಗುಂಪುಗಳ ಪ್ರದೇಶ ಮಟ್ಟದ ಮತ್ತು ನಗರ ಮಟ್ಟದ ಒಕ್ಕೂಟದ ಸದಸ್ಯರಗಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೋಳ್ಳಲಾಗಿತ್ತು .
ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ ಮಾತನಾಡಿ, ಮಹಿಳೆ ಎಂದರೆ ಒಂದು ಶಕ್ತಿ ಇಂತಹ ಅನೇಕ ಶಕ್ತಿ ಒಂದುಗೂಡಿ ಅಭಿವೃದ್ಧಿ ಹೊಂದಬೇಕು ಗುಜರಾತಿನ ಲಿಜ್ಜತ ಪಾಪಡ ಬೆಳೆದು ಬಂದ ಕುರಿತು ಮಾಹಿತಿ ನೀಡಿ ಮಹಿಳೆಯರು ಸ್ವಂತ ಉದ್ಯೋಗ ಮಾಡಿ ಧೈರ್ಯ ದಿಂದ ಯಾವುದೇ ಸಮಸ್ಯೆಗಳು ಎದುರಿಸುವ ಶಕ್ತಿ ಪಡೆಯಲು ಕರೆ ನೀಡಿದರು.
ಪಾಲಿಕೆಯ ಜಂಟಿ ಆಯುಕ್ತರಾದ ಮಾಧವ ಗಿತ್ತಿ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿ ಮುಂದೆ ಬರಬೇಕು ಅವರು ಮನಸ್ಸು ಮಾಡಿದರೆ ಎಲ್ಲವು ಸಾಧ್ಯ ಅಂದರು ಧೈರ್ಯವೇ ಇವರ ಸಾಧನೆಗೆ ಕಾರಣ ಎಂದು ಹೇಳಿದರು.
ಅಗ್ರಣೀಯ ವ್ಯವಸ್ಥಾಪಕರಾದ ಆರ್ ಅಣ್ಣಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಉತ್ತಮ ಕಾರ್ಯಕ್ರಮ ನಿರ್ವಹಿಸಿದ ಸ್ವ ಸಹಾಯ ಪ್ರದೇಶ ಮಟ್ಟದ ಒಕ್ಕೂಟ , ನಗರ ಮಟ್ಟದ ಒಕ್ಕೂಟ ಸದಸ್ಯರುಗಳಿಗೆ ಪ್ರೋತ್ಸಾಹದಾಯಕವಾಗಿ ಕಿರುಕಾಣಿಕೆ ನೀಡಲಾಯಿತು. ಯೋಜನೆ ಅಡಿ ಸಾಲ ಸೌಲಭ್ಯ ನೀಡಿದ ಎಲ್ಲ ಬ್ಯಾಂಕ ಯೋಜನೆ ವ್ಯವಸ್ಥಾಪಕರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯೋಜನೆಯ ಉಪ ಗುಂಪುಗಳ ಘಟಕಗಳಾದ ಸ್ವಯಂ ಉದ್ಯೋಗ ಗುಂಪು ಉದ್ಯೋಗ ಮತ್ತು ಸ್ವ ಸಹಾಯ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣೆ ಮಾಡಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

