ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿಗೆ ಸುಮಾರು ೩ ತಾಸು ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕಾದು ಕಾದು ಬೇಸರಗೊಂಡ ಸನ್ನಿವೇಶ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಕಂಡು ಬಂದಿತು.
ಹೌದು, ಉಕ್ರೇನ್ ಹಾಗೂ ರಷ್ಯಾ ಯುದ್ಧದಲ್ಲಿ ಬಲಿಯಾದ ನವೀನ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಚಳ್ಳಕೇರಿಯ ಗ್ರಾಮಕ್ಕೆ ತೆರಳು ಹೊರಡಲಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಧ ಬಲವರ್ಧನೆಗಾಗಿ ಅವರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕುಮಾರಸ್ವಾಮಿ ಸರಿಯಾದ ಸಮಯಕ್ಕೆ ಆಗಮಿಸದೇ ತಡವಾಗಿ ಆಗಮಿಸದರಿಂದ ಕೆಲ ತೆನೆ ಕಾರ್ಯಕರ್ತರು ಬಂದ ದಾರಿಗೆ ಸುಂಕವಿಲ್ಲವೆಂದು ತೆರಳಿದರೇ, ಕೆಲ ಕಾರ್ಯಕರ್ತ ಕಾದು ಕಾದು ಸುಸ್ತಾಗಿ ಏನಪ್ಪಾ ಇದು ನಮ್ಮ ನಾಯಕರು ಇನ್ನೂ ಬರಲೇ ಇಲ್ಲಾ ಎಂದು ಹೇಳುವ ಮೂಲಕ ಅಸಮಾಧಾನಗೊಂಡಿದಂತೂ ಸುಳ್ಳಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

