ಹುಬ್ಬಳ್ಳಿ:21 ವರ್ಷಗಳ ನಂತರ ನಡೆಯಲಿರುವ ಹುಬ್ಬಳ್ಳಿಯ ಬೆಂಗೇರಿಯ ಶ್ರೀ ಗ್ರಾಮದೇವತೆಗಳಾದ ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ನೂತನ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಕೇಶ್ವಾಪುರದ ಸರ್ವೋದಯ ಸರ್ಕಲ್ ದಿಂದ ಪ್ರಾರಂಭಗೊಂಡ ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ಮೆರವಣಿಗೆ ಬಹಳ ಅದ್ದೂರಿಯಾಗಿ ಪ್ರಾರಂಬಗೊಂಡಿತು. ಸಹಸ್ರಾರು ಜನರ ಉಪಸ್ಥಿತಿಯಲ್ಲಿ ಕೇಶ್ವಾಪುರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮಾರ್ಗದುದ್ದಕ್ಕೂ ಭಕ್ತರು ಜಯಘೋಷಗಳನ್ನು ಕೂಗಿದರು.

ಏಪ್ರಿಲ್ 2 ರಂದು ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ.
ಮಾರ್ಚ್ 29 ಮಂಗಳವಾರ , ಬೆಳಗ್ಗೆ 9.00 ಗಂಟೆಗೆ ರಥೋತ್ಸವ ” ಎಪ್ರಿಲ್ 2 ಶನಿವಾರ ಬೆಳಗಿನ 6.00 ಗಂಟೆಗೆ ಯುಗಾದಿಯ ಶುಭದಿನದಂದು ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರುವುದು.
ನಂತರ ನವಗ್ರಹಾದಿ ಹೋಮಗಳು , ಯಜ್ಞ ಯಾಗಾದಿ , ಶ್ರೀ ದೇವತೆಯರ ಪ್ರತಿಷ್ಠಾಪನೆ ಪೂರ್ಣಾಹುತಿ ಅಲಂಕಾರ ಪೂಜೆ , ಉಡಿ ತುಂಬುವ ಕಾರ್ಯಕ್ರಮ , ಮಹಾಪ್ರಸಾದ ಮುಂತಾದ ದೇವತಾ ಕಾರ್ಯಕ್ರಮಗಳು ಜರಗುವವು .
9 ದಿನಗಳವರೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕಲ ಭಕ್ತಾದಿಗಳು ತನು , ಮನ , ಧನ ದೊಂದಿಗೆ ಭಕ್ತಿಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗ್ರಾಮದೇವತಾ ಟ್ರಸ್ಟ್ ಕಮಿಟಿ , ಬೆಂಗೇರಿ ಹಾಗೂ ಹುಬ್ಬಳ್ಳಿ ಶ್ರೀ ಗ್ರಾಮದೇವತಾ ಜಾತ್ರಾ ಉತ್ಸವ ಸಮಿತಿ ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

