Breaking News

ಮಾ. 28 ರಂದು ಕ್ಯಾನ್ಸರ್ ರೋಗಿಗಳಿಗೆ ಪ್ರಶಾಂತಿ ಮಂದಿರ ಲೋಕಾರ್ಪಣೆ


ಹುಬ್ಬಳ್ಳಿ: ಅಂತಿಮಘಟ್ಟದ ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ನಗರದ ಮಜೇಥಿಯಾ ಫೌಂಡೇಶನ್ ವತಿಯಿಂದ ರಮೀಲಾ ಪ್ರಶಾಂತಿ ಮಂದಿರ ಹಾಸ್ಪೈಸ್ ನಿರ್ಮಾಣ ಮಾಡಿದ್ದು, ಇದರ ಲೋಕಾರ್ಪಣೆಯನ್ನು ಮಾ. 28 ರಂದು ಮಾಡಲಾಗುವುದು ಎಂದು ಮಜೇಥಿತಾ ಫೌಂಡೇಶನ್ ಟ್ರಸ್ಟಿ ಡಾ.ಕೆ.ರಮೇಶ ಬಾಬು ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್ ಭಾಗದಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಈ ವೇಳೆ ರೋಗಿಗಳು ಪಡಬಾರದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡು ರೋಗಿಗಳ ಕೊನೆಯ ಜೀವನ ಸುಖಶಾಂತಿಯಿಂದ ಇರಬೇಕೆಂಬ ಉದ್ದೇಶದಿಂದ ರಮೀಲಾ ಪ್ರಶಾಂತಿ ಮಂದಿರವನ್ನು ಸ್ಥಾಪಿಸಲಾಗಿದೆ ಎಂದರು.

ಈ ಶಾಂತಿ ಮಂದಿರದಲ್ಲಿ ಮೂವತ್ತಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆಯಬಹುದು, ಅದರಲ್ಲಿ ಹತ್ತು ಜನ ಪುರುಷರು, ಹತ್ತು ಜನ ಮಹಿಳೆಯರಿಗೆ ಸಾಮಾನ್ಯ ವಾರ್ಡ್ ಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಇನ್ನುಳಿದ ಬೆಡ್ ಗಳಿಗೆ ಶುಲ್ಕ ನಿಗಧಿ ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಹಾಸ್ಪೈಸ್ ಮಂದಿರದಲ್ಲಿ ನುರಿತ ಕ್ಯಾನ್ಸರ್ ತಜ್ಞರಿಂದ ಉತ್ತಮ ಗುಣಮಟ್ಟದ ಚಿಕಿತ್ಸೆ, ಯೋಗಕೇಂದ್ರ, ಒಳಾಂಗಣ ಕ್ರೀಡೆ, ಊಟೋಪಚಾರ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಜೇಥಿಯಾ ಫೌಂಡೇಶನ್ ಚೇರ್ಮನ್ ಜಿತೇಂದ್ರ ಮಜೇಥಿಯಾ, ಟ್ರಸ್ಟಿಗಳಾದ ಡಾ.ವ್ಹಿ.ಬಿ.ನಿಟ್ಟಾಲಿ, ಎಚ್.ಆರ್.ಪ್ರಲ್ಹಾದ್ ರಾವ್, ಫೌಂಡೇಶನ್ ಸಿಇಓ ಅಜಿತ ಕುಲಕರ್ಣಿ, ಅಮರೇಶ ಹಿಪ್ಪರಗಿ ಸೇರಿದಂತೆ ಮುಂತಾದವರು ಇದ್ದರು.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *