Breaking News

ನಾಳೆ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವ : ವಿವಿಧ ಕಾರ್ಯಕ್ರಮ ಜರುಗುವುದು


ಹುಬ್ಬಳ್ಳಿ : ಯುಗಾದಿ ಹಬ್ಬದ ಅಂಗವಾಗಿ ನಾಳೆ ಸಂಜೆ ಉಣಕಲ್ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಯುಗಾದಿ ಮಹೋತ್ಸವ ಹಾಗೂ ಶ್ರೀ ಸದ್ಗುರು ಸಿದ್ದೇಶ್ವರರ ೧೦೧ ನೇ ವರ್ಷದ ಪುಣ್ಯರಾಧನೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ದಪ್ಪಜ್ಜ ಮಠ ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಅವರು,, ಸಿದ್ದೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಹೆಲಿಕಾಪ್ಟರ್ ಮೂಲಕ ಪುಷ್ಪ ನಮನವನ್ನು ಬೆಳಗಾವಿಯ ಬಾಹುಬಲಿ ಧರೆಣ್ಣವರ, ಗುರಪ್ಪ ಕುಸುಗಲ್, ಬಾಲರಾಜ್ ಜಾಲಹಳ್ಳಿ, ನಿಂಗಪ್ಪ ಮಳೆಪ್ಪನವರ ಅವರಿಂದ ಸಲ್ಲಿಸಲಿದ್ದಾರೆ ಎಂದರು.

ನಾಳೆ ಬೆಳಿಗ್ಗೆ ೧೦.೩೦ ಕ್ಕೆ ಶ್ರೀ ಮಠದ ಕೈಲಾಸ ಮಂಟಪದಲ್ಲಿ ಸಾಮೂಹಿಕ ಉಚಿತ ವಿವಾಹಗಳು ರುದ್ರಾಕ್ಷಿ ಮಠದ ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿದೆ‌. ಇಂದು ಸಂಜೆ ೮ ಗಂಟೆಗೆ ಆರ್.ಎಸ್.ಎಸ್ ಪ್ರಮುಖ ರಾಮಣ್ಣ ಅವರು ಉಣಕಲ್ ಶ್ರೀ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಈ ವರ್ಷದ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವವು ೧೦೧ ನೇ ವರ್ಷದ ಸಂಭ್ರಮವಾಗಿದ್ದು, ಇದೇ ದಿ. ೩ ರಿಂದ ೫ ರವರೆಗೆ ಬಯಲು ಕುಸ್ತಿಗಳು ನಡೆಯಲಿದ್ದು, ಭಕ್ತಾದಿಗಳಿಗೆ ಪ್ರಸಾದ್ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ದಿ. ೬ ರಂದು ಸಂಜೆ ಎರಡತ್ತಿನ ಮಠದ ಸಿದ್ಧಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕಳಸ ಇಳಿಸುವ ಕಾರ್ಯಕ್ರಮ ಮುಗಿದ ನಂತರ ಜಾತ್ರಾಮಹೋತ್ಸವ ಸಂಪನ್ನಗೊಳ್ಳಲಿದೆ.

Share News

About admin

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *