ಸದಾ ಹಿಂಸೆ ಅನುಭವಿಸುತ್ತಿದ್ದ ಆ ಹೆಂಡತಿ, ಆವತ್ತು ತವರಿಗೆ ಹೋಗಿ ಬರುತ್ತೇನೆ ಎಂದು ಗಂಡನ ಬಳಿ ಹೇಳಿದ್ದಳು. ಈ ಮಾತಿಗೆ ಉದ್ರೇಕಗೊಂಡ ಪತಿ, ಪತ್ನಿಗೆ ಬಲವಾಗಿ ಕಪಾಳಕ್ಕೆ ಹೊಡೆದಿದ್ದಾನೆ. ಪತಿಯ ಬಲವಾದ ಪೆಟ್ಟಿಗೆ ಆಕೆ ಅಲ್ಲೇ ಕುಸಿದುಬಿದ್ದು ತಕ್ಷಣವೇ ಪ್ರಾಣ ಬಿಟ್ಟಿದ್ದಾಳೆ.ಪತ್ನಿ ಸಾವನ್ನಪ್ಪಿದ ನಂತರ ದಾರಿ ತೋಚದೇ ಹೋದ ಆ ಕ್ರೂರಿ ಗಂಡ, ತನ್ನ ಪಾಪದ ಕೃತ್ಯವನ್ನು ಮುಚ್ಚಿಹಾಕಲು ನಿರ್ಧರಿಸುತ್ತಾನೆ. ಆತ ತಕ್ಷಣವೇ ಶವವನ್ನು ತನ್ನ ಜಮೀನಿನಲ್ಲಿದ್ದ ಬೋರ್‌ವೆಲ್ ಒಳಗೆ ಹಾಕಿ, ಅದನ್ನು ಮುಚ್ಚಿಹಾಕುತ್ತಾನೆ.ಪತ್ನಿಯ ಶವವನ್ನು ಬೋರ್‌ವೆಲ್ ಒಳಗೆ ಹೂತ ನಂತರ ನಾಟಕ ಶುರು ಮಾಡಿದ ಆತ, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದಾನೆ. “ತನ್ನ ಅಜ್ಜಿಗೆ ಹುಷಾರಿಲ್ಲ, ಆಸ್ಪತ್ರೆಯಲ್ಲಿದ್ದಾಳೆ ಎಂದು ಹೇಳಿ ಹೆಂಡತಿ ಮನೆಯಿಂದ ಹೊರಟು ಹೋಗಿದ್ದಾಳೆ, ಆದರೆ ವಾಪಸ್ ಬಂದಿಲ್ಲ” ಎಂದು ದೂರಿನಲ್ಲಿ ತಿಳಿಸಿದ್ದ
bigtvnews | Hubli Dharwad News | Kannada News | Karnataka News Hubli News | News In Hubli | Local news

