Breaking News

ಹುಬ್ಬಳ್ಳಿಯಲ್ಲಿ ನಾನ್ ವೆಜ್ ಮಾರ್ಕೆಟ್​ನಲ್ಲಿ ಭರ್ಜರಿ ವ್ಯಾಪಾರ

ಹುಬ್ಬಳ್ಳಿ: ಇಂದು ಯುಗಾದಿ ಹೊಸತೊಡಕು ಹಿನ್ನೆಲೆ ಹುಬ್ಬಳ್ಳಿಯಲ್ಲಿ ನಾನ್ ವೆಜ್ ಮಾರ್ಕೆಟ್​ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹಳೇಹುಬ್ಬಳ್ಳಿ, ಗಣೇಶ ಪೇಟೆ, ಮ್ಯಾದಾರ ಓಣಿ, ಕಮರಿಪೇಟೆ ಮಟನ್ ಮಾರ್ಕೆಟ್​ನಲ್ಲಿ ಮಟನ್, ಚಿಕನ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ನಮ್ಮ ಬಳಿ ಯಾರೂ ಕೂಡ ಹಲಾಲ್, ಜಟ್ಕಾ ಕಟ್ ಬಗ್ಗೆ ಕೇಳಿಲ್ಲ. ಗ್ರಾಹಕರು ಕೇಳಿದರೆ ಅವರಿಗೆ ಬೇಕಾದಂತೆ ಮಾಂಸ ಕೊಡುತ್ತೇವೆ ಅಂತ ನಸರೂಲ್ಲಾ ಖಾನ ಮಟನ್ ಸ್ಟಾಲ್ ಮಾಲೀಕ ಮಾಹಿತಿ ನೀಡಿದರು.

ಹಲಾಲ್, ಜಟ್ಕಾ ವಿಚಾರದ ಬಗ್ಗೆ ಗ್ರಾಹಕರ ಮುಂದೆ ಮಾತಾಡಲ್ಲ. ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಮಾಂಸ ಸಿದ್ಧ ಮಾಡಿಕೊಡ್ತೇವೆ. ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಮಾಂಸ ಖರೀದಿಸುತ್ತಿದ್ದಾರೆ. ಯಾರು ಹಿಂದೂ ಮುಸ್ಲಿಂ ಎನ್ನದೇ ಎಲ್ಲರೂ ಮಾಂಸ ಖರೀದಿ ಮಾಡುತ್ತಿದ್ದಾರೆ ಎಂದು ಮತ್ತೋರ್ವ ಮಾಂಸ ವ್ಯಾಪಾರಿ ಅಲ್ತಾಫ್ ಹೇಳಿದ್ದಾರೆ.

Share News

About admin

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *